
ನವದೆಹಲಿ[ಆ. 07] ಆರ್ಟಿಕಲ್ 370 ರದ್ದು ಪರಿಣಾಮ ಎಂಬಂತೆ ಪಾಕಿಸ್ತಾನ ವರ್ತಿಸತೊಡಗಿದೆ. ಪಾಕಿಸ್ತಾನವು ಬುಧವಾರ ಇಸ್ಲಾಮಾಬಾದ್ ನಲ್ಲಿ ಇರುವ ಭಾರತದ ರಾಯಭಾರಿಯನ್ನು ವಾಪಸ್ ಕಳುಹಿಸಿದೆ.
ಇದರ ಜತೆಗೆ ಐದು ಅಂಶಗಳ ಯೋಜನೆಯನ್ನು ಸಹ ಘೋಷಿಸಿದೆ. ಭಾರತದ ಜತೆಗೆ ಸಂಬಂಧವನ್ನು ಕಡಿತಗೊಳಿಸಲು ನಿರ್ಧರಿಸಿದ್ದು ದ್ವಿಪಕ್ಷೀಯವ್ಯಾಪಾರ- ವ್ಯವಹಾರಗಳನ್ನು ಬಂದ್ ಮಾಡುತ್ತೇನೆ ಎಂದಿದೆ.
ಕಾಶ್ಮೀರದ ಬೀದಿಯಲ್ಲಿ ಅಜಿತ್ ದೋವೆಲ್ ಊಟ, ಏನಿದರ ಹಿನ್ನೋಟ?
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದಕ್ಕೆ ಪಾಕಿಸ್ತಾನ ಮೊದಲು ಕ್ಯಾತೆ ತೆಗೆದಿತ್ತು. ಭಾರತದ ಹೈಕಮಿಷನರ್ ಆಗಿ ಅಜಯ್ ಬಿಸಾರಿಯಾ ಪಾಕಿಸ್ತಾನದಲ್ಲಿ ಇದ್ದರೆ, ಭಾರತಕ್ಕೆ ಪಾಕಿಸ್ತಾನದ ಹೈಕಮಿಷನರ್ ಆಗಿ ನೇಮಕ ಆಗಿರುವ ಮೊಯಿನ್-ಉಲ್-ಹಕ್ ಇನ್ನೂ ಅಧಿಕಾರ ಸ್ವೀಕರಿಸಬೇಕಿದ್ದು ಮುಂದೆ ಯಾವ ಪರಿಣಾಮ ಆಗಲಿದೆ ನೋಡಬೇಕಿದೆ.
ಕಾಶ್ಮೀರ ವಿಚಾರವಾಗಿ ವಿಶ್ವ ಸಂಸ್ಥೆ ಮಧ್ಯ ಪ್ರವೇಶ ಮಾಡಬೇಕು ಎಂಬ ಮಾತನ್ನು ಪಾಕ್ ಹೇಳಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಮನವಿ ಮಾಡಿ, ಕಾಶ್ಮೀರ ವಿಚಾರಕ್ಕೆ ಮಧ್ಯಸ್ಥಿಕೆ ವಹಿಸಲು ಕೇಳಿದ್ದು ಭಾರತ ಸಹಜವಾಗಿಯೇ ವಿರೋಧಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.