ಕ್ಷಮೆ ಕೇಳದಿದ್ರೆ ಮಾತುಕತೆ ಇಲ್ಲ: ದೀದಿ ಮನವಿ ತಿರಸ್ಕರಿಸಿದ ವೈದ್ಯರು!

By Web DeskFirst Published Jun 15, 2019, 3:34 PM IST
Highlights

ತೀವ್ರ ಸ್ವರೂಪ ಪಡೆದ  ಸರ್ಕಾರಿ ಕಿರಿಯ ವೈದ್ಯರ ಮುಷ್ಕರ| ವೈದ್ಯರ ಮುಷ್ಕರ ಕಂಡು ಹೈರಾಣಾದ ಪ.ಬಂಗಾಳ ಸರ್ಕಾರ| ಮಾತುಕತೆಗೆ ಬರುವಂತೆ ಸಿಎಂ ಮಮತಾ ಬ್ಯಾನರ್ಜಿ ಮನವಿ| ಸಿಎಂ ಕ್ಷಮಗೆ ಆಗ್ರಹಿಸುತ್ತಿರುವ ಪ್ರತಿಭಟನಾಕಾರರು| ಕ್ಷಮೆ ಕೇಳುವವರೆಗೂ ಮಾತುಕತೆ ಇಲ್ಲ ಎಂದ ವೈದ್ಯರು| ಮುಷ್ಕರಕ್ಕೆ ಬೆಂಬಲ ನೀಡಿದ ಭಾರತೀಯ ವೈದ್ಯಕೀಯ ಸಂಘ| ಜೂ.17ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ IMA ಕರೆ|

ಕೋಲ್ಕತ್ತಾ(ಜೂ.15): ಪ.ಬಂಗಾಳದಲ್ಲಿ ಸರ್ಕಾರಿ ಕಿರಿಯ ವೈದ್ಯರ ಮುಷ್ಕರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮಾತುಕತೆಗೆ ಬರುವಂತೆ ಸಿಎಂ ಮಮತಾ ಬ್ಯಾನರ್ಜಿ ಮಾಡಿದ್ದ ಮನವಿಯನ್ನು ಪ್ರತಿಭಟನಾಕಾರರು ತಿರಸ್ಕರಿಸಿದ್ದಾರೆ.

ಮಾತುಕತೆಗೆ ಬರುವ ಮೂಲಕ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂಬ ಮಮತಾ ಮನವಿ ತಿರಸ್ಕರಿಸಿರುವ ವೈದ್ಯರು, ಕ್ಷಮೆ ಕೇಳುವವರೆಗೂ ಮಾತುಕತೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Kolkata: Junior doctors of NRS Medical and Hospital continue their strike for the fifth day over violence against doctors. pic.twitter.com/FIAlKIFwDR

— ANI (@ANI)

ಸರ್ಕಾರದ ಧೋರಣೆ ಖಂಡಿಸಿ ಇದುವರೆಗೂ ಸುಮಾರು 300 ವೈದ್ಯರು ರಾಜೀನಾಮೆ ನೀಡಿದ್ದು, ಸಮಸ್ಯೆ ಬಗೆಹರಿಯುವ ಲಕ್ಷಣ ಕಂಡುಬರುತ್ತಿಲ್ಲ. ಇದೇ ವೇಳೆ ವೈದ್ಯರ ಮುಷ್ಕರಕ್ಕೆ ಭಾರತೀಯ ವೈದ್ಯಕೀಯ ಸಂಘ ಕೂಡ ಬೆಂಬಲ ನೀಡಿದ್ದು, ಇದೇ ಜೂ.17ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.

click me!