ಗರ್ಭದಲ್ಲೇ ಭ್ರೂಣಕ್ಕೆ ಸರ್ಜರಿ ಮಾಡಿದ ವೈದ್ಯ

By Suvarna Web DeskFirst Published Jan 25, 2018, 9:49 AM IST
Highlights

ನವಜಾತು ಶಿಶುಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಜೀವದಾನ ಮಾಡುವ ಮಹಾ ವೈದ್ಯರ ಬಗ್ಗೆ ಕೇಳಿಯೇ ಇರುತ್ತೀರಿ. ಆದರೆ ಇಲ್ಲೊಬ್ಬರು ವೈದ್ಯರು ಮಗು ಜನಿಸುವ ಮೊದಲೇ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. 

ನವದೆಹಲಿ: ನವಜಾತು ಶಿಶುಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಜೀವದಾನ ಮಾಡುವ ಮಹಾ ವೈದ್ಯರ ಬಗ್ಗೆ ಕೇಳಿಯೇ ಇರುತ್ತೀರಿ. ಆದರೆ ಇಲ್ಲೊಬ್ಬರು ವೈದ್ಯರು ಮಗು ಜನಿಸುವ ಮೊದಲೇ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಹೊಟ್ಟೆಯಲ್ಲಿದ್ದ ಭ್ರೂಣವನ್ನು ಹೊರತೆಗೆದು, ಶಸ್ತ್ರಚಿಕಿತ್ಸೆ ಮಾಡಿ ಮತ್ತೆ ಸ್ವಸ್ಥಾನಕ್ಕೆ ಇಟ್ಟು ಗಮನ ಸೆಳೆದಿದ್ದಾರೆ!

ಟೆಕ್ಸಾಸ್‌ನಲ್ಲಿ ಮಕ್ಕಳ ತಜ್ಞರಾಗಿರುವ ನೈಜೀರಿಯಾ ಮೂಲದ ಡಾ| ಒಲುಯಿಂಕಾ ಒಲುಟೊಯೆ ಅವರು ಕಳೆದ ವರ್ಷವೇ ಈ ಅಪರೂಪದ ಶಸ್ತ್ರಚಿಕಿತ್ಸೆ ಮಾಡಿದ್ದರು. ಇತ್ತೀಚೆಗೆ ವ್ಯಕ್ತಿಯೊಬ್ಬರು ಈ ವಿಷಯವನ್ನು ಟ್ವೀಟರ್‌ನಲ್ಲಿ ಬಹಿರಂಗಪಡಿಸಿದ್ದಾರೆ.

ಗರ್ಭಿಣಿಯೊಬ್ಬರನ್ನು ಪರಿಶೀಲನೆ ನಡೆಸಿದಾಗ ಆಕೆಯ ಹೊಟ್ಟೆಯಲ್ಲಿರುವ ಭ್ರೂಣದಲ್ಲಿ ಗಡ್ಡೆ ಪತ್ತೆಯಾಯಿತು. ಆ ಗಡ್ಡೆ ತೆಗೆಯಲು ಡಾ| ಒಲುಯಿಂಕಾ ತಂಡ ನಿರ್ಧರಿಸಿತು.

ಹೀಗಾಗಿ ಗರ್ಭಿಣಿಯ ಹೊಟ್ಟೆಯಿಂದ ಮೊದಲು ಭ್ರೂಣವನ್ನು ಹೊರತೆಗೆದು, ಗಡ್ಡೆಯನ್ನು ನಿರ್ಮೂಲನೆ ಮಾಡಿ ಬಳಿಕ ಭ್ರೂಣವನ್ನು ಮತ್ತೆ ತಾಯಿಯ ಹೊಟ್ಟೆಯಲ್ಲೇ ಇಡಲಾಯಿತು. 32 ವಾರಗಳ ಬಳಿಕ ಆರೋಗ್ಯವಂತ ಮಗುವಿಗೆ ಆ ತಾಯಿ ಜನ್ಮವಿತ್ತಳು.

click me!