
ವಾಷಿಂಗ್ಟನ್: ಭಾರತೀಯ ಮೂಲದ ಬ್ರಿಟನ್ ಪ್ರಜೆ, ಐಸಿಸ್ ಉಗ್ರ ಸಿದ್ಧಾರ್ಥ್ ಧರ್ ಅಲಿಯಾಸ್ ಅಬು ರುಮಯ್ಸಾನನ್ನು ಜಾಗತಿಕ ಉಗ್ರ ಎಂದು ಅಮೆರಿಕ ಘೋಷಿಸಿದೆ. ಜಿಹಾದಿ ಜಾನ್ ಎಂದೇ ಕುಖ್ಯಾತಿ ಹೊಂದಿದ್ದ ಮೊಹಮ್ಮದ್ ಎಮ್ವಾಜಿ ಸಿರಿಯಾದಲ್ಲಿ ಐಸಿಸ್ ಪರವಾಗಿ, ವಿರೋಧಿಗಳನ್ನು ಹತ್ಯೆ ಮಾಡುವ ಕೆಲಸ ಮಾಡುತ್ತಿದ್ದ.
ಆತನ ಹತ್ಯೆಯ ನಂತರ ಆತನ ಸ್ಥಾನವನ್ನು ಅಬು ಹೊತ್ತುಕೊಂಡಿದ್ದಾನೆ ಎನ್ನಲಾಗಿದೆ. ಅಬು ರುಮಯ್ಸಾನಿಂದ ಅಮೆರಿಕ ಪ್ರಜೆಗಳಿಗೆ ಮತ್ತು ಅಮೆರಿಕದ ಭದ್ರತೆಗೆ ಅಪಾಯ ಇದೆ ಎನ್ನುವ ಕಾರಣಕ್ಕಾಗಿ ಆತನನ್ನು ಜಾಗತಿಕ ಉಗ್ರ ಘೋಷಿಸಲಾಗಿದೆ. ಈ ಕ್ರಮದಿಂದಾಗಿ ಈ ಈತನಿಗೆ ಯಾವುದೇ ರೀತಿ ಹಣಕಾಸಿನ ನೆರವು ನೀಡುವುದು ಅಪಾರಾಧ ಎನ್ನಿಸಿಕೊಳ್ಳಲಿದೆ. ಜೊತೆಗೆ ಈತನ ಆಸ್ತಿ ಜಪ್ತಿ ಮಾಡುವ ಅವಕಾಶ ಅಮೆರಿಕ ಪಡೆದುಕೊಳ್ಳಲಿದೆ.
ಯಾರೀ ಸಿದ್ಧಾರ್ಥ್? : ಪಶ್ಚಿಮ ಬಂಗಾಳ ಮೂಲದ ಹಿಂದೂ ಕುಟುಂಬಕ್ಕೆ ಸೇರಿದ ಸಿದ್ಧಾರ್ಥ್ ಧರ್ ಹುಟ್ಟಿದ್ದು ಲಂಡನ್‌ನಲ್ಲೇ. ಅಲ್ಲೇ ವಿದ್ಯಾಭ್ಯಾಸ ಮಾಡಿ, ಕೆಲಸಕ್ಕೂ ಸೇರಿಕೊಂಡಿದ್ದ ಈತ ತನ್ನ ಯೌವನದ ದಿನಗಳಲ್ಲೇ ಇಸ್ಲಾಂಗೆ ಮತಾಂತರ ವಾಗಿ ತನ್ನ ಹೆಸರನ್ನು ಅಬು ರುಮಯ್ಸಾ ಎಂದು ಬದಲಾಯಿಸಿಕೊಂಡಿದ್ದ ನಂತರ ಅಲ್ ಮುಹಾಜಿರೋನ್ ಎಂಬ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಸಿದ್ಧಾರ್ಥ್, 2014ರಲ್ಲಿ ಪೊಲೀಸರ ಕಣ್ಣು ತಪ್ಪಿಸಿ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಸಿರಿಯಾಕ್ಕೆ ಪರಾರಿಯಾಗಿ ಅಲ್ಲಿ ಐಸಿಸ್ ಸೇರಿಕೊಂಡಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.