ಸೊಹ್ರಾಬ್ ಕೇಸಿನ ಜಡ್ಜ್ ಸಾವಿನ ಬಗ್ಗೆ ಅನುಮಾನ

By Suvarna Web DeskFirst Published Nov 21, 2017, 8:18 PM IST
Highlights

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಆಪಾದಿತರಾಗಿದ್ದ ಶಂಕಿತ ಉಗ್ರ ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣದಲ್ಲಿ ನ್ಯಾಯಾಧೀಶ ಬ್ರಿಜ್‌ಗೋಪಾಲ ಲೋಯಾ ಅವರು ಸಾವನ್ನಪ್ಪಿ 3 ವರ್ಷವಾದ ಬಳಿಕ ಈ ಬಗ್ಗೆ ಈಗ ಅನುಮಾನಗಳು ಸೃಷ್ಟಿಯಾಗಿವೆ.

ಮುಂಬೈ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಆಪಾದಿತರಾಗಿದ್ದ ಶಂಕಿತ ಉಗ್ರ ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣದಲ್ಲಿ ನ್ಯಾಯಾಧೀಶ ಬ್ರಿಜ್‌ಗೋಪಾಲ ಲೋಯಾ ಅವರು ಸಾವನ್ನಪ್ಪಿ 3 ವರ್ಷವಾದ ಬಳಿಕ ಈ ಬಗ್ಗೆ ಈಗ ಅನುಮಾನಗಳು ಸೃಷ್ಟಿಯಾಗಿವೆ.

ಮುಂಬೈನ ಸಿಬಿಐ ಕೋರ್ಟ್ ವಿಶೇಷ ನ್ಯಾಯಾಧೀಶರಾಗಿದ್ದ ಲೋಯಾ ಅವರು 2014ರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಗಿ ಹೇಳಲಾಗಿತ್ತು. ನಾಗಪುರಕ್ಕೆ ಅವರು ಮದುವೆಯೊಂದಕ್ಕೆ ಹೋದಾಗ ಈ ಘಟನೆ ನಡೆದಿತ್ತು.

ಆದರೆ ‘ಕಾರವಾನ್’ ಎಂಬ ಪತ್ರಿಕೆಯಲ್ಲಿ ಅವರ ಸಾವಿನ ಸಂಬಂಧ ಈಗ ವಿಶೇಷ ವರದಿಯೊಂದು ಪ್ರಕಟವಾಗಿದ್ದು, ಅನುಮಾನಗಳನ್ನು ಪ್ರಸ್ತಾಪಿಸಿದೆ.

ಕುಟುಂಬದ ಸದಸ್ಯರಿಗೆ ಲೋಯಾ ಅವರ ಸಾವಿನ ಸುದ್ದಿ ಗೊತ್ತಾಗಿದ್ದು ಆರೆಸ್ಸೆಸ್ ಕಾರ್ಯಕರ್ತ ಈಶ್ವರ ಬಹೇತಿ ಎಂಬಾತನಿಂದ. ಸಾವಿನ ಸುದ್ದಿಯನ್ನು ಗುರುತು-ಪರಿಚಯ ಇಲ್ಲದ ಆರೆಸ್ಸೆಸ್ ಕಾರ್ಯಕರ್ತನೊಬ್ಬ ಹೇಗೆ ತಿಳಿಸಿದ ಎಂದು ಪ್ರಶ್ನೆ ಎತ್ತಿದ್ದಾರೆ.

ಅಲ್ಲದೆ, ಅವರ ಬಂಧು ಎಂದು ಹೇಳಿಕೊಂಡು ಮರಣೋತ್ತರ ದಾಖಲೆಗೆ ಸಹಿ ಹಾಕಿದ ಲೋಯಾ ಎಂಬ ಬಂಧು ನಮಗಿಲ್ಲ ಎಂದಿದ್ದಾರೆ ಕುಟುಂಬಸ್ಥರು.

click me!