
ವಾಷಿಂಗ್ಟನ್: ವಿಜ್ಞಾನ, ತಂತ್ರಜ್ಞಾನಗಳು ಸಾಕಷ್ಟುಅಭಿವೃದ್ಧಿಗೊಂಡಿರುವ ಆಧುನಿಕ ಕಾಲಘಟ್ಟದಲ್ಲಿ ಪೂಜೆ, ಪುನಸ್ಕಾರ, ಮತ್ತು ಆಚಾರ-ವಿಚಾರಗಳ ಪಾಲನೆ ಮಾಡಲು ಅಸಡ್ಡೆ ತೋರುವುದು ಸಾಮಾನ್ಯ. ಆದರೆ, ದೇವರು ದಿಂಡಿರನ್ನು ನಂಬದ ನಾಸ್ತಿಕರಿಗಿಂತಲೂ ದೇವರ ನಂಬುವ ಆಸ್ತಿಕರು 4 ವರ್ಷಗಳ ಕಾಲ ಹೆಚ್ಚು ಬದುಕುತ್ತಾರೆ ಎಂಬ ಅಚ್ಚರಿ ವಿಚಾರವು ಅಮೆರಿಕದ ಅಧ್ಯಯನ ವರದಿಯಿಂದ ಬಹಿರಂಗವಾಗಿದೆ.
ಅಮೆರಿಕದಾದ್ಯಂತ ಸಾವಿಗೀಡಾದ ಸುಮಾರು 1000 ಮಂದಿಯ ಲಿಂಗ ಮತ್ತು ವೈವಾಹಿಕ ಜೀವನ, ಸಾಮಾಜಿಕ ಮತ್ತು ಸ್ವಯಂಪ್ರೇರಿತ ಕಾರ್ಯಚಟುವಟಿಕೆಗಳನ್ನು ಆಧರಿಸಿ ಈ ವಿಶ್ಲೇಷಣೆ ಮಾಡಲಾಗಿದೆ. ಇದರ ಪ್ರಕಾರ ನಾಸ್ತಿಕರಿಗಿಂತ ಧಾರ್ಮಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರು 9.45 ವರ್ಷಕ್ಕಿಂತ ಹೆಚ್ಚು ವರ್ಷ ಜೀವಿಸಿರುವುದು ಕಂಡುಬಂದಿದೆ ಎಂದು ಒಹಿಯೊ ರಾಜ್ಯ ಸ್ಟೇಟ್ ವಿವಿಯ ವೈದ್ಯಕೀಯ ವಿದ್ಯಾರ್ಥಿ ಲೌರಾ ವಾಲ್ಲಾಸ್ ತಿಳಿಸಿದ್ದಾರೆ.
ವ್ಯಕ್ತಿಯ ದೀರ್ಘಾಯುಷ್ಯ ಮತ್ತು ಆಸ್ತಿಕತೆ ನಡುವಿರುವ ಸಂಬಂಧಕ್ಕೆ ಈ ಅಧ್ಯಯನ ವರದಿಯು ಸಾಕಷ್ಟುಪುರಾವೆಗಳನ್ನು ಒದಗಿಸುತ್ತದೆ ಎಂದು ಒಹಿಯೊ ವಿವಿಯ ಪ್ರೊಫೆಸರ್ ಬಾಲ್ಡ್‌ವಿನ್ ವೇ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.