ಮಹಿಳೆಯರಿಗೆ ರಾತ್ರಿ ಪಾಳಿ ವಹಿಸುವಂತಿಲ್ಲ: ಸದನ ಸಮಿತಿ ಶಿಫಾರಸ್ಸು

By Suvarna Web DeskFirst Published Mar 28, 2017, 11:24 AM IST
Highlights

ಮಹಿಳೆಯರ ಭದ್ರತೆ, ಸುರಕ್ಷತೆ ಹಾಗೂ ಖಾಸಗಿ ಅಗತ್ಯಗಳ ಹಿತದೃಷ್ಟಿಯಿಂದ ಐಟಿ-ಬಿಟಿ ಕಂಪನಿಗಳಲ್ಲಿ ರಾತ್ರಿ ಪಾಳಿಯನ್ನು ವಹಿಸುವಂತಿಲ್ಲವೆಂದು ಸದನ ಸಮಿತಿ ಶಿಫಾರಸ್ಸು ಮಾಡಿದೆ.  

ಬೆಂಗಳೂರು (ಮಾ.28): ಮಹಿಳೆಯರ ಭದ್ರತೆ, ಸುರಕ್ಷತೆ ಹಾಗೂ ಖಾಸಗಿ ಅಗತ್ಯಗಳ ಹಿತದೃಷ್ಟಿಯಿಂದ ಐಟಿ-ಬಿಟಿ ಕಂಪನಿಗಳಲ್ಲಿ ರಾತ್ರಿ ಪಾಳಿಯನ್ನು ವಹಿಸುವಂತಿಲ್ಲವೆಂದು ಸದನ ಸಮಿತಿ ಶಿಫಾರಸ್ಸು ಮಾಡಿದೆ.  

ಐಟಿ-ಬಿಟಿ ಕಂಪನಿಗಳಲ್ಲಿ ಮಹಿಳೆಯರು ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುವುದು ಬೇಡ. ಬೆಳಿಗ್ಗೆ ಅಥವಾ ಮಧ್ಯಾಹ್ನದ ಪಾಳಿಗಳನ್ನು ಮಹಿಳೆಯರಿಗೆ ಗೊತ್ತುಪಡಿಸಿ ಎಂದು ಎನ್. ಎ ಹ್ಯಾರೀಸ್ ನೇತೃತ್ವದ ಸಮಿತಿ ವಿಧಾನಸಭೆಯಲ್ಲಿ 32 ನೇ ವರದಿ ಮಂಡಿಸಿದೆ.

ಸೆ.9 2016 ರಂದು ಸಮಿತಿಯು ಇನ್ಫೋಸಿಸ್ ಮತ್ತು ಬಯೋಕಾನ್ ಕಂಪನಿಗಳಿಗೆ ಭೇಟಿ ನೀಡಿ ಆಡಳಿತ ಮಂಡಳಿ, ಉದ್ಯೋಗಿಗಳ ಜೊತೆ ಸಂವಾದ ನಡೆಸಿದೆ.ಅವರ ಪ್ರತಿಕ್ರಿಯೆ ಆಧರಿಸಿ ಕೆಲವು ಶಿಫಾರಸ್ಸುಗಳನ್ನು ಮಾಡಲಾಗಿದೆ ಎಂದು ವರದಿ ಹೇಳಿದೆ.

click me!