ದೇವೇಗೌಡರನ್ನು ಭೇಟಿ ಮಾಡಿದ ಡಿಕೆಶಿ

By Suvarna Web DeskFirst Published Feb 8, 2017, 11:48 AM IST
Highlights

ಸಂಘದಲ್ಲಿ ಭ್ರಷ್ಟಾಚಾರವೆಸಗಿದ್ದಾರೆ ಎಂಬ ಆರೋಪ ಹಿನ್ನಲೆಯಲ್ಲಿ ಅಧ್ಯಕ್ಷ ಅಪ್ಪಾಜಿ ಗೌಡ ಸೇರಿದಂತೆ ಅವರ ಬಣದ ಇತರೆ ಪದಾಧಿಕಾರಿಗಳನ್ನು ಅವಿಶ್ವಾಸ ನಿರ್ಣಯ ಕೈಗೊಂಡು ಪದಚ್ಯತಗೊಳಿಸಿದ್ದರು

ನವದೆಹಲಿ(ಫೆ.08): ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರನ್ನು ಇಂಧನ ಸಚಿವ ಡಿ.ಕೆ. ಶಿವಕುಮಾರ್ ನವದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಕೆಲ ದಿನಗಳಿಂದ ರಾಜ್ಯ ಒಕ್ಕಲಿಗರ ಸಂಘದಲ್ಲಿ ನಡೆಯುತ್ತಿರುವ ವಿದ್ಯಮಾನದ ಬಗ್ಗೆ ಗೌಡರಿಗೆ ವಿವರಿಸಿದ ಸಚಿವರು ಸಮಸ್ಯೆಯನ್ನು ಬಗೆಹರಿಸಿ ಎಂದು ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

ಸಂಘದಲ್ಲಿ ಭ್ರಷ್ಟಾಚಾರವೆಸಗಿದ್ದಾರೆ ಎಂಬ ಆರೋಪ ಹಿನ್ನಲೆಯಲ್ಲಿ ಅಧ್ಯಕ್ಷ ಅಪ್ಪಾಜಿ ಗೌಡ ಸೇರಿದಂತೆ ಅವರ ಬಣದ ಇತರೆ ಪದಾಧಿಕಾರಿಗಳನ್ನು ಅವಿಶ್ವಾಸ ನಿರ್ಣಯ ಕೈಗೊಂಡು ಪದಚ್ಯತಗೊಳಿಸಿದ್ದರು. ನಂತರ ಬೆಟ್ಟೇಗೌಡ ಸಂಘದ ಅಧ್ಯಕ್ಷರಾಗಿದ್ದರು. ಆದರೆ ಪದಚ್ಯತಿ ಪ್ರಕ್ರಿಯೆಯಲ್ಲಿ ಸಂಘದ ಬೈಲಾದಲ್ಲಿರುವ ನಿಯಮಗಳನ್ನು ಪಾಲಿಸಿಲ್ಲ ಎಂದು ಈ ಪ್ರಕರಣ ಕೋರ್ಟ್'ವರೆಗೂ ಹೋಗಿತ್ತು.

click me!