‘ಮಹಾರಾಷ್ಟ್ರದಿಂದ ಕಲ್ಲಿದ್ದಲು ಪಡೆಯುವ ಯತ್ನಕ್ಕೆ ಕೇಂದ್ರದಿಂದ ಕಲ್ಲು’

By Suvarna Web DeskFirst Published Dec 1, 2017, 9:09 PM IST
Highlights

ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಹಿನ್ನೆಲೆಯಲ್ಲಿ, ಮಹಾರಾಷ್ಟ್ರದಿಂದ ಕಲ್ಲಿದ್ದಲು ಪಡೆಯುವ ಯತ್ನಕ್ಕೆ ಕೇಂದ್ರ ಸರಕಾರ ಕಲ್ಲು ಹಾಕಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಹಿನ್ನೆಲೆಯಲ್ಲಿ, ಮಹಾರಾಷ್ಟ್ರದಿಂದ ಕಲ್ಲಿದ್ದಲು ಪಡೆಯುವ ಯತ್ನಕ್ಕೆ ಕೇಂದ್ರ ಸರಕಾರ ಕಲ್ಲು ಹಾಕಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಯಡಿಯೂರಪ್ಪ ಅವರು ಪ್ರತ್ಯೇಕ ಕಾರಿಡರ್’ಗೆ ಕೇಂದ್ರ ಗ್ರಿಡ್ ನಿಂದ 2.50 ರೂ. ದರದಲ್ಲಿ ವಿದ್ಯುತ್ ಕೊಡಿಸಿದರೆ ಸ್ವಾಗತಿಸುತ್ತೇನೆ. ನಾವು ವಿದ್ಯುತ್ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ. ಆದರೂ ರಾಜ್ಯ ಸರ್ಕಾರಕ್ಕೆ ಕೇಂದ್ರ ನೊಟೀಸ್ ನೀಡಿದೆ, ಇದು ನಮಗೆ ಆಘಾತಕಾರಿ ಎಂದು ಡಿಕೆಶಿ ಹೇಳಿದ್ದಾರೆ.

ಎಷ್ಟೇ ಕಷ್ಟವಾದರೂ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ, ಅಂತಾರಾಷ್ಟ್ರೀಯ ಮೂಲಗಳಿಂದ‌ ಕಲ್ಲಿದ್ದಲು ಖರೀದಿ ಯತ್ನ ನಡೆಸುತ್ತಿದ್ದೇವೆ. ಡಿಸೆಂಬರ್ 6,7,8 ರಂದು ದೆಹಲಿಯಲ್ಲಿ ಇಂಧನ ಸಚಿವರ ಸಭೆ ನಡೆಯಲಿದೆ. ಕಲ್ಲಿದ್ದಲು ಕೊರತೆ ಬಗ್ಗೆ ಅಲ್ಲಿ ಈ ಬಗ್ಗೆ ಪ್ರಸ್ತಾಪಿಸುವುದಾಗಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

click me!