ತ್ರಿವಳಿ ತಲಾಖ್’ಗೆ ಜಾಮೀನು-ರಹಿತ ವಾರಂಟ್, 3 ವರ್ಷ ಜೈಲು ಶಿಕ್ಷೆ?

Published : Dec 01, 2017, 08:31 PM ISTUpdated : Apr 11, 2018, 12:46 PM IST
ತ್ರಿವಳಿ ತಲಾಖ್’ಗೆ ಜಾಮೀನು-ರಹಿತ ವಾರಂಟ್, 3 ವರ್ಷ ಜೈಲು ಶಿಕ್ಷೆ?

ಸಾರಾಂಶ

ತ್ರಿವಳಿ ತಲಾಖ್ ಪದ್ಧತಿಯನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕರಡು ಕಾನೂನು ಪ್ರತಿಯನ್ನು ಅಂತಿಮಗೊಳಿಸಿದ್ದು, ಕಾನೂನು ಉಲ್ಲಂಘಿಸುವವರಿಗೆ ಜಾಮೀನು –ರಹಿತ ಬಂಧನ ಹಾಗೂ 3 ವರ್ಷ ಜೈಲು ಶಿಕ್ಷೆಯನ್ನು ವಿಧಿಸುವ ಅವಕಾಶ ನೀಡಿದೆ.

ನವದೆಹಲಿ: ತ್ರಿವಳಿ ತಲಾಖ್ ಪದ್ಧತಿಯನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕರಡು ಕಾನೂನು ಪ್ರತಿಯನ್ನು ಅಂತಿಮಗೊಳಿಸಿದ್ದು, ಕಾನೂನು ಉಲ್ಲಂಘಿಸುವವರಿಗೆ ಜಾಮೀನು –ರಹಿತ ಬಂಧನ ಹಾಗೂ 3 ವರ್ಷ ಜೈಲು ಶಿಕ್ಷೆಯನ್ನು ವಿಧಿಸುವ ಅವಕಾಶ ನೀಡಿದೆ.

ಕರಡು ಕಾನೂನು ಪ್ರತಿಯನ್ನು ರಾಜ್ಯ ಸರ್ಕಾರಗಳಿಗೆ ಕಳುಹಿಸಿಕೊಡಲಾಗಿದ್ದು, ಸಲಹೆ-ಸೂಚನೆ, ಅಭಿಪ್ರಾಯವನ್ನು ತಿಳಿಸುವಂತೆ ಕೇಂದ್ರವು ಕೋರಿದೆ. ಆದರೆ ಸಂಸತ್ತಿನಲ್ಲಿ ಮಸೂದೆಯನ್ನು ಅಂಗೀಕರಿಸಲು ರಾಜ್ಯಸರ್ಕಾರಗಳ ಸಮ್ಮತಿಯ ಅಗತ್ಯವಿರುವುದಿಲ್ಲ. ಈ ಕಾನೂನು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯವಾಗುವುದಿಲ್ಲ.

ರಾಜನಾಥ್ ಸಿಂಗ್ ನೇತೃತ್ವದ ಸಚಿವರುಗಳ ಸಮಿತಿಯು ಈ ಕರಡು-ಕಾನೂನನ್ನು ರೂಪಿಸಿದೆ. ವಿದೇಶಾಂಗ ಲಾಖೆ ಸಚಿವೆ ಸುಷ್ಮಾ ಸ್ವರಾಜ್, ಹಣಕಾಸು ಮಂತ್ರಿ ಅರುಣ್ ಜೇಟ್ಲಿ,  ರವಿಶಂಕರ್ ಪ್ರಸಾದ್ ಹಾಗೂ ಪಿ.ಪಿ. ಚೌಧರಿ ಈ ಸಮಿತಿಯ ಸದಸ್ಯರಾಗಿದ್ದಾರೆ.

ಕರಡು-ಕಾನೂನಿನ ಪ್ರಕಾರ, ತ್ರಿವಳಿ ತಲಾಖ್ ಸಂತ್ತಸ್ತೆಯು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ಬಳಿಕ ಮೆಜಿಸ್ಟ್ರೇಟ್ ಮೊರೆಹೋಗಿ ತನ್ನ ಅಪ್ರಾಪ್ತ ಮಕ್ಕಳು, ಹಾಗೂ ಪತಿಯಿಂದ ನಿರ್ವಹಣಾ ಖರ್ಚನ್ನು ಪಡೆದುಕೊಳ್ಳಬಹುದಾಗಿದೆ.

ಮೌಖಿಕ, ಬರಹ ರೂಪದ ಅಥವಾ ಈ-ಮೇಲ್, ಎಸ್.ಎಸಂ.ಎಸ್, ವಾಟ್ಸಪ್’ನಂತಹ ಯಾವುದೇ ಇಲೆಕ್ಟ್ರಾನಿಕ್  ರೂಪದಲ್ಲಿ ನೀಡಲಾಗುವ ತ್ರಿವಳಿ ತಲಾಖ್’ಗಳನ್ನು ಕರಡು-ಕಾನೂನಿನಲ್ಲಿ ನಿಷೇಧಿಸಲಾಗಿದೆ.

ಕಳೆದ ಗಸ್ಟ್’ನಲ್ಲಿ ತ್ರಿವಳಿ ತಲಾಖನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದ್ದರೂ, ಸುಮಾರು 67 ತ್ರಿವಳಿ ತಲಾಖ್ ಪ್ರಕರಣಗಳು ದಾಖಲಾಗಿವೆ ಎಂದು ಹೇಳಲಾಗಿದೆ. ಮುಂಬರುವ ಚಳಿಗಾಲ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸುವ ಸಾಧ್ಯತೆಗಳಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಾಟಾದ ತಾಜ್‌, ಐಟಿಸಿಗೆ ಅದಾನಿ ಗ್ರೂಪ್ ಟಕ್ಕರ್, ಐಷಾರಾಮಿ ಹೋಟೆಲ್‌ ಉದ್ಯಮಕ್ಕೆ ಎಂಟ್ರಿ, ಏರ್ಪೋರ್ಟ್‌ಗಳೇ ಟಾರ್ಗೆಟ್!
ಬೆಂಗಳೂರು ಕಾಲೇಜಿನಲ್ಲಿ ಹಾಜರಾತಿ ಹಗರಣ; ಅಲಯನ್ಸ್ ವಿವಿ ದೂರು, 6 ಜನರ ವಿರುದ್ಧ ಎಫ್‌ಐಆರ್!