
ತೆಲಂಗಾಣದಲ್ಲಿ ಮತ್ತೊಮ್ಮೆ ರಾಜನಂತೆ ಮೆರೆಯಲು ಕೆಸಿಆರ್ ನಾನಾ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್ ಹಾಗೂ ಟಿಡಿಪಿ ಮಾತ್ರ ಕಠಿಣ ಪೈಪೋಟಿ ನೀಡುತ್ತಿವೆ. 119 ಕ್ಷೇತ್ರಗಳಲ್ಲಿನ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಗಮನಿಸಿ, ಕೆಸಿಆರ್ ಹಾಲು ಕುಡಿದಷ್ಟೇ ಸಂತಸಗೊಂಡಿದ್ದಾರೆ. ಆದ್ರೆ, ತೆಲಂಗಾಣವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಚಂದ್ರಬಾಬು ನಾಯ್ಡು ನಾನಾ ತಂತ್ರ ಹೆಣೆದಿದ್ದಾರೆ.
ತೆಲಂಗಾಣದ ಘಟನಾನುಘಟಿಗಳು
ಕೆ.ಸಿ.ಚಂದ್ರಶೇಖರ್ ರಾವ್ : ಟಿಆರ್ಎಸ್
ಅಕ್ಬರುದ್ದೀನ್ ಒವೈಸಿ : ಎಐಎಂಐಎಂ
ಎನ್.ಸುಹಾಸಿನಿ : ಟಿಡಿಪಿ
ಅವಧಿಗೂ ಮುನ್ನ ವಿಧಾನಸಭೆ ವಿಸರ್ಜಿಸಿದ ಕೆ.ಚಂದ್ರಶೇಖರ ರಾವ್ ಗಜ್ವಾಲ್ನಿಂದ ಸ್ಪರ್ಧಿಸಿದ್ದಾರೆ. ಅಬ್ಬರದ ಭಾಷಣದ ಮೂಲಕ ತೆಲುಗು ಜನರನ್ನು ಹುಚ್ಚೆಬ್ಬಿಸಿದ್ದ ಅಕ್ಬರುದ್ದೀನ್ ಒವೈಸಿ ಚಂದ್ರಯಾನಗುಟ್ಟದಲ್ಲಿ ಕಣಕ್ಕಿಳಿದಿದ್ದಾರೆ. ತೆಲುಗು ದೇಶಂ ಪಾರ್ಟಿಯಿಂದ ಎನ್.ಟಿ.ರಾಮರಾವ್ ಮೊಮ್ಮಗಳು ಎನ್.ಸುಹಾಸಿನಿ ಕುಕ್ಕಟಪಲ್ಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ಮಿಜೋರಾಂನಲ್ಲಿ ಮೊಳಗುತ್ತಾ ಎನ್ಪಿಪಿ ಕಹಳೆ..?
ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್ನ ಕೊನೆಯ ಕೊಂಡಿಯಾಗಿರುವ ಮಿಜೋರಾಂ ಈ ಬಾರಿ ಕೈ ಜಾರುವ ಎಲ್ಲ ಸಾಧ್ಯತೆ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. 40 ಕ್ಷೇತ್ರಗಳ ಪುಟ್ಟ ರಾಜ್ಯದಲ್ಲಿ ಮೊಜೋ ನ್ಯಾಷನಲ್ ಫ್ರಂಟ್ ಪಕ್ಷ ಕಾಂಗ್ರೆಸ್ ಗೆಲುವಿನ ಕನಸಿಗೆ ಅಡ್ಡಿಯಾಗುವ ಸಾಧ್ಯತೆ ಇದೆ.
ಮಿಜೋರಾಂ ಘಟಾನುಘಟಿಗಳು
ಲಾಲ್ ತನ್ಹಲ್ವಾ: ಕಾಂಗ್ರೆಸ್
ಲಾಲ್ದುಹೋಮಾ: ZNP
ಐದು ಬಾರಿಯ ಸಿಎಂ ಲಾಲ್ ತನ್ಹಲ್ವಾ ಚಂಫೈ ದಕ್ಷಿಣ ಕ್ಷೇತ್ರ ಹಾಗೂ ಸರ್ಚಿಪ್ ಕ್ಷೇತ್ರದಿಂದ ಸ್ಫರ್ಧಿಸುತ್ತಿದ್ದಾರೆ. ಲಾಲ್ ವಿರುದ್ಧ ತೊಡೆ ತಟ್ಟಿರುವ ಝೆಡ್ಎನ್ಪಿಯ ಲಾಲ್ದುಹೋಮಾ, ಸರ್ಚಿಪ್ ಹಾಗೂ ಐಜ್ವಾಲ್ನಿಂದ ಸ್ಪರ್ಧಿಸಿದ್ದಾರೆ.
ಒಟ್ಟಾರೆ, ತೆಲಂಗಾಣ, ಮಿಜೋರಾಂ, ಛತ್ತಿಸ್ಗಡ ರಾಜ್ಯಗಳ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ. ಈ ಮೂರು ರಾಜ್ಯಗಳ ಫಲಿತಾಂಶ ಲೋಕಸಭೆ ಚುನಾವಣೆ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರೋದು ಪಕ್ಕಾ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ