
ರಾಮನಗರ: ‘ಮುಂದಿನ ಮುಖ್ಯಮಂತ್ರಿ ನಾನೇ ಎಂದು ಎಲ್ಲಿಯೂ ಹೇಳಿಲ್ಲ. ಅರ್ಜೆಂಟ್‌ನಲ್ಲಿ ಇರುವವರು ರೇಸ್ ಮುಗಿಸಲಿ. ತಾಳ್ಮೆಯಿಂದ ಕಾಯಲು ನಾನು ತಯಾರಿದ್ದೇನೆ’ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಹುದ್ದೆ ವಿಚಾರದಲ್ಲಿ ನಾನು ಯಾರಿಗೂ ಅರ್ಜೆಂಟ್ ಮಾಡಬೇಡಿ, ಎಲ್ಲರದು ಮುಗಿಯಲಿ ಎಂದಷ್ಟೇ ಹೇಳಿದ್ದೇನೆ. ಶುಭ ಗಳಿಗೆ ಬರಬೇಕಾದರೆ ಬರುತ್ತದೆ, ಅದಕ್ಕೆ ಆತುರ ಪಡಬೇಕಾಗಿಲ್ಲ ಎಂದರು.
‘ಈಗ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಮುಂದಾಗುತ್ತೇನೆ. ಬಹಳ ಅರ್ಜೆಂಟ್‌ನಲ್ಲಿ ಇರುವವರು ರೇಸ್ ಮುಗಿಸಲಿ. ನಾನು ತಾಳ್ಮೆಯಿಂದ ಕಾಯುತ್ತೇನೆ’ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.