
ರಾಮನಗರ: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ನಾಮಪತ್ರ ಸಲ್ಲಿಸುವ ಹಿಂದಿನ ದಿನ ಬಿಡದಿಯ ಧ್ಯಾನಪೀಠದ ನಿತ್ಯಾನಂದ ಸ್ವಾಮಿಯ ಆಶೀರ್ವಾದ ಪಡೆದಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಬುಧವಾರ ಸಂಜೆ ಬಿಡದಿಯ ನಿತ್ಯಾನಂದ ಧ್ಯಾನಪೀಠಕ್ಕೆ ತೆರಳಿದ್ದ ಅವರು ಅರ್ಧ ಗಂಟೆಗೂ ಹೆಚ್ಚು ಹೊತ್ತು ನಿತ್ಯಾನಂದ ಜೊತೆ ಚರ್ಚೆ ನಡೆಸಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಹೋಗಿದ್ದು ನಿಜ: ಈ ಬಗ್ಗೆ ಕನಕಪುರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಡಿಕೆಶಿ, ನಾನು ನಿತ್ಯಾನಂದಸ್ವಾಮಿ ಆಶ್ರಮಕ್ಕೆ ಹೋಗಿದ್ದು ನಿಜ. ಅಲ್ಲಿ ನೂರಾರು ಮತಗಳಿದ್ದು ಎಲ್ಲೆಡೆ ಮತ ಯಾಚಿಸಲು ಹೋಗುವಂತೆ ಅಲ್ಲೂ ಹೋಗಿದ್ದೆ ಎಂದು ತಿಳಿಸಿದರು. ನಮಗೆ ಒಂದೆರಡು ಮತಗಳೂ ಅತ್ಯಮೂಲ್ಯ. ಹಾಗಾಗಿ ನಾನು ಮರಳಿಗವಿ ಮಠ ಸೇರಿದಂತೆ ಎಲ್ಲಾ ಮಠಮಾನ್ಯ ಆಶ್ರಮಗಳಿಗೆ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.