ಮೋದಿ ರಚಿಸಿದ ಗುಜರಾತಿ ಕವನ ಫುಲ್ ವೈರಲ್

First Published Apr 20, 2018, 12:05 PM IST
Highlights

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಯವರು ಕವನ ರಚನೆಗೆ ಖ್ಯಾತರಾಗಿದ್ದರು. ಇದೀಗ ಅವರ ಸಾಲಿಗೆ ಪ್ರಧಾನಿ ನರೇಂದ್ರ ಮೋದಿಯವರೂ ಸೇರಿದ್ದಾರೆ. ಪ್ರಧಾನಿ ಮೋದಿಯವರೂ ತಮ್ಮ ಮಾತೃಭಾಷೆಯಲ್ಲಿ ಕವನವೊಂದನ್ನು ಪ್ರಕಟಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಲಂಡನ್‌: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಯವರು ಕವನ ರಚನೆಗೆ ಖ್ಯಾತರಾಗಿದ್ದರು. ಇದೀಗ ಅವರ ಸಾಲಿಗೆ ಪ್ರಧಾನಿ ನರೇಂದ್ರ ಮೋದಿಯವರೂ ಸೇರಿದ್ದಾರೆ. ಪ್ರಧಾನಿ ಮೋದಿಯವರೂ ತಮ್ಮ ಮಾತೃಭಾಷೆಯಲ್ಲಿ ಕವನವೊಂದನ್ನು ಪ್ರಕಟಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮ್ಮ ಮಾತೃಭಾಷೆ ಗುಜರಾತಿಯಲ್ಲಿ ತಾವು ಬರೆದ ‘ರಮತಾ ರಾಮ್‌ ಅಕೇಲಾ’ ಎಂಬ ಕವನವನ್ನು ಮೋದಿ ಟ್ವೀಟ್‌ ಮಾಡಿದ್ದಾರೆ.

ಲಂಡನ್‌ನಲ್ಲಿ ನಡೆದಿದ್ದ ‘ಭಾರತ್‌ ಕೀ ಬಾತ್‌, ಸಬ್‌ಕೇ ಸಾತ್‌’ ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಮೋದಿ, ತಾವು ಗುಜರಾತಿ ಭಾಷೆಯಲ್ಲಿ ಕವನ ರಚಿಸುವುದಾಗಿ ತಿಳಿಸಿದ್ದರು. ತಮ್ಮ ಕವನದ ಒಂದೆರಡು ಸಾಲುಗಳನ್ನು ತಿಳಿಸುವಂತೆ ಕೇಳಿಕೊಂಡಾಗ, ಸದ್ಯಕ್ಕೆ ನೆನಪಿಗೆ ಬರುತ್ತಿಲ್ಲ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕವನ ಪ್ರಕಟಿಸುವುದಾಗಿ ಭರವಸೆ ನೀಡಿದ್ದರು. ‘ಲಂಡನ್‌ ಕಾರ್ಯಕ್ರಮದಲ್ಲಿ ನಾನು ಪ್ರಸ್ತಾಪಿಸಿದ್ದ ನನ್ನ ‘ರಮತಾ ರಾಮ್‌ ಅಕೇಲಾ’ ಕವನ ಇಲ್ಲಿದೆ’ ಎಂದು ಟ್ವೀಟ್‌ ಮಾಡಿದ ಮೋದಿ, ಹತ್ತು ಸಾಲುಗಳ ಕವನ ಪ್ರಕಟಿಸಿದ್ದಾರೆ.

click me!