
ಇಂಡಿಗೋ ವಿಮಾನಯಾನ ಸಂಸ್ಥೆ ತನ್ನ 12ನೇ ವಾರ್ಷಿಕೋತ್ಸದ ಸಂಭ್ರಮದಲ್ಲಿ ತನ್ನ ಗ್ರಾಹಕರಿಗೆ ಉಚಿತವಾಗಿ ಎರಡೆರಡು ಟಿಕೆಟ್ ನೀಡುತ್ತಿದೆ ಎಂಬ ಸಂದೇಶ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಿಮಾನಯಾನಕ್ಕೆ ಉಚಿತ ಟಿಕೆಟ್ ಪಡೆದುಕೊಳ್ಳಲು ಈ ಲಿಂಕ್ ಒತ್ತಿ ಎಂದೂ ಕೂಡ ಹೇಳಲಾಗಿದೆ.
ಆ ಲಿಂಕ್ ಮೇಲೆ ಕ್ಲಿಕ್ ಮಾಡಿದಾದ ಇಂಡಿಗೋ ಏರ್‌ಲೈನ್ಸ್ ಎಂಬ ವೆಬ್‌ಪೇಜ್ ತೆರೆದುಕೊಳ್ಳುತ್ತದೆ. ಅದರಲ್ಲಿ ಇಂಡಿಗೋ ಏರ್‌ಲೈನ್ಸ್ ಕುಟುಂಬದ ಪ್ರತಿಯೊಬ್ಬರಿಗೂ 2 ಉಚಿತ ಟಿಕೆಟ್ ನೀಡುತ್ತಿದೆ. ಸದ್ಯ ಇಷ್ಟುಟಿಕೆಟ್‌ಗಳು ಮಾತ್ರ ಬಾಕಿ ಇವೆ ಎನ್ನಲಾಗಿದೆ. ಜೊತೆಗೆ ನೀವು ಈ ಹಿಂದೆ ಇಂಡಿಗೋದಲ್ಲಿ ಪ್ರಯಾಣಿಸಿದ್ದೀರಾ ಎಂಬ ಪ್ರಶ್ನೆಯನ್ನೂ ಕೇಳಲಾಗಿದೆ. ಪ್ರಶ್ನೆಗೆ ಉತ್ತರಿಸಿದ ಬಳಿಕ ಟಿಕೆಟ್ ಪಡೆಯುವ ವಿಧಾನ ವಿವರಿಸಲಾಗಿದೆ. ಅದರಲ್ಲಿ ಮೊದಲನೆಯನೆಯದು; ಈ ಸಂದೇಶವನ್ನು ವಾಟ್ಸ್‌ಆ್ಯಪ್‌ನ 5 ಗ್ರೂಪ್‌ಗೆ ಕಳಿಸುವುದು. ಎರಡನೆಯದು; ವಿಳಾಸ ಭರ್ತಿ, ಕೊನೆಯಲ್ಲಿ 24-48ಗಂಟೆಯೊಳಗಾಗಿ ನಿಮ್ಮ ಟಿಕೆಟ್ ಇ-ಮೇಲ್ ಮಾಡಲಾಗುತ್ತದೆ ಎನ್ನಲಾಗಿದೆ.
ಆದರೆ ನಿಜಕ್ಕೂ ಇಂಡಿಗೋ ಏರ್‌ಲೈನ್ಸ್ ಉಚಿತವಾಗಿ ಟಿಕೆಟ್ ನೀಡುತ್ತಿದೆಯೇ ಅಂದರೆ ಇಲ್ಲ. ಇದೊಂದು ವಾಟ್ಸ್‌ಆ್ಯಪ್ ಸ್ಕ್ಯಾಮ್. ನೀವು ವಾಟ್ಸ್‌ಆ್ಯಪ್ ಗ್ರೂಪ್‌ಗೆ ಈ ಸಂದೇಶ ಕಳುಹಿಸದೇ ಇದ್ದಲ್ಲಿ ವೆಬ್‌ಸೈಟ್‌ನಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂಬ ಎಚ್ಚರಿಗೆ ಬರುತ್ತದೆ. ಅಲ್ಲಿಗೆ ಇದೊಂದು ಸುಳ್ಳುಸುದ್ದಿ ಎಂಬುದು ಸ್ಪಷ್ಟ. ಜೊತೆಗೆ ಯುಆರ್‌ಎಲ್ ಲಿಂಕ್ ಪರಿಶೀಲಿಸಿದಾಗ ಇದು ನಕಲಿ ವೆಬ್‌ಸೈಟ್ ಎಂಬುದು ಪತ್ತೆಯಾಗಿದೆ. ಈ ರೀತಿಯ ನಕಲಿ ವೆಬ್‌ಸೈಟ್‌ಗಳ ಲಿಂಕ್‌ಗಳಿಂದ ಹಣವೇನೂ ನಷ್ಟವಾಗುವುದಿಲ್ಲ. ಬದಲಿಗೆ ನಮ್ಮ ಮೊಬೈಲ್ ನಂಬರ್‌ಗಳನ್ನು ವಂಚಕರು ಪಡೆದು ಅದನ್ನು ಟೆಲಿ ಮಾರ್ಕೆಟರ್‌ಗಳಿಗೆ ಮಾರಾಟ ಮಾಡುತ್ತಾರೆ. ಅಲ್ಲಿಂದ ಅನಗತ್ಯ ಕರೆಗಳು ಬರತೊಡಗುತ್ತವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ