ದೀಪಾವಳಿ : ಬ್ಯಾಂಕಿಂದ ಗ್ರಾಹಕರಿಗೆ 50, 000 ಕೋಟಿ ಹಣ

By Web DeskFirst Published Nov 17, 2018, 10:15 AM IST
Highlights

ದೀಪಾವಳಿ ಸಂದರ್ಭದಲ್ಲಿ ಬ್ಯಾಂಕಿನಿಂದ ಗ್ರಾಹಕರು ಒಟ್ಟು 50 ಸಾವಿರ ಕೋಟಿ ಹಣವನ್ನು ಪಡೆದುಕೊಂಡಿದ್ದಾರೆ. ಇದರಿಂದ ಕೋಟಿ ಕೋಟಿ ಪ್ರಮಾಣದಲ್ಲಿ ಭರ್ಜರಿ ಖರೀದಿ ಮಾಡಿರುವುದು ಸಾಬೀತಾಗಿದೆ. 

ನವದೆಹಲಿ: ದೀಪಾವಳಿ ವೇಳೆ ದೇಶಾದ್ಯಂತ ಜನ ಭರ್ಜರಿ ಖರೀದಿ ನಡೆಸಿರುವುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ. 

ದೀಪಾವಳಿ ಹಬ್ಬ ಬಂದ ವಾರದಲ್ಲಿ ದೇಶಾದ್ಯಂತ ಜನತೆ ಬ್ಯಾಂಕ್‌ಗಳಿಂದ 49418 ಕೋಟಿ ರು. ಹಣವನ್ನು ವಿತ್‌ಡ್ರಾ ಮಾಡಿದ್ದಾರೆ. ನ.9ಕ್ಕೆ ಕೊನೆಗೊಂಡ ವಾರದಲ್ಲಿ ದೇಶದಲ್ಲಿ 20.2 ಲಕ್ಷ ಕೋಟಿ ರು. ಹಣ ಚಲಾವಣೆಯಲ್ಲಿತ್ತು. 

ಇದು ಹಿಂದಿನ ವಾರಕ್ಕಿಂತ 49418 ಕೋಟಿ ರು. ಹೆಚ್ಚು. ಇದು ಅಪನಗದೀಕರಣಗೊಂಡ ನಂತರ ಮಾರುಕಟ್ಟೆಯಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ನಗದು ಚಲಾವಣೆಗೆ ಬಂದಿರುವ ವಾರವೂ ಹೌದು. ಅಪನಗದೀಕರಣ ಜಾರಿಯಾದ ವಾರದಲ್ಲಿ ಜನ ಬ್ಯಾಂಕ್‌ಗಳಿಂದ 52786 ಕೋಟಿ ರು. ಹಣ ಪಡೆದುಕೊಂಡಿದ್ದರು.

click me!