ರಾಜಕೀಯ ಹಾರಾಟ ನಿಲ್ಲಿಸಿದ 'ಹಳ್ಳಿ ಹಕ್ಕಿ'

By Web DeskFirst Published Aug 2, 2019, 3:45 PM IST
Highlights

ರಾಜಕೀಯ ಹಾರಾಟ ನಿಲ್ಲಿಸಿದ 'ಹಳ್ಳಿ ಹಕ್ಕಿ'|  ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ರಾಜೀನಾಮೆ ನೀಡಿದ್ದಾರೆ ಎಂಬೆಲ್ಲ ಮಾತುಗಳಿಗೆ ಫುಲ್‌ಸ್ಟಾಪ್‌ ಇಟ್ಟ ವಿಶ್ವನಾಥ್‌ . 

ನವದೆಹಲಿ/ಬೆಂಗಳೂರು, (ಆ.02):  ಹುಣಸೂರು ಕ್ಷೇತ್ರದಿಂದ ಗೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್‌ನಿಂದ ಅಮಾನತುಗೊಂಡಿರುವ 'ಹಳ್ಳಿ ಹಕ್ಕಿ' ರಾಜಕೀಯ ಹಾರಾಟ ನಿಲ್ಲಿಸಿದೆ.

"

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ : JDS ನಲ್ಲಿ ಊಹಿಸದ ಬೆಳವಣಿಗೆ

 ಇಂದು (ಶುಕ್ರವಾರ)  ನವದೆಹಲಿಯಲ್ಲಿ ಸುದ್ದಿಗಾರರೊಂಇಗೆ ಮಾತನಾಡಿರುವ ಎಚ್. ವಿಶ್ವನಾಥ್, 'ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗುತ್ತಿದ್ದು, ಮುಂದೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳುವ ಮೂಲಕ ರಾಜಕೀಯ ನಿವೃತ್ತಿ ಘೋಷಿಸಿದರು.

ವಿಶ್ವನಾಥ್‌ಗೆ ಪಾಠ ಕಲಿಸಲು ದೇವೇಗೌಡ್ರಿಂದ ಮಾಸ್ಟರ್ ಪ್ಲಾನ್!

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದಾಗಿನಿಂದಲೂ ಅವರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ರಾಜೀನಾಮೆ ನೀಡಿದ್ದಾರೆ ಎನ್ನುವ ಮಾತುಗಳಿಗೆ ಫುಲ್‌ಸ್ಟಾಪ್‌ ಹಾಕಿರುವ ವಿಶ್ವನಾಥ್‌, ಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಎಚ್. ವಿಶ್ವನಾಥ್ ಅವರು ರಾಜ್ಯ ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾದ 17 ಅತೃಪ್ತ ಶಾಸಕರ ಪೈಕಿ ಒಬ್ಬರಾಗಿದ್ದರು. ಇದಕ್ಕೂ ಮೊದಲು ಕಾಂಗ್ರೆಸ್‌ನಿಂದ ಹೊರಬಂದ ವಿಶ್ವನಾಥ್ ಅವರಿಗೆ ಜೆಡಿಎಸ್ ಹುಣಸೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಿ ರಾಜಕೀಯ ಮರುಜನ್ಮ ನೀಡಿತ್ತು.

ಅಷ್ಟೇ ಅಲ್ಲದೇ ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಯನ್ನು ಸಹ ನೀಡಲಾಗಿತ್ತು. ಆದ್ರೆ ಅದ್ಯಾಕೋ ವಿಶ್ವನಾಥ್ ಅವರಿಗೆ ಇದೆಲ್ಲ ಬೇಡವೆನಿಸಿದ್ದು, ರಾಜ್ಯಾಧ್ಯಕ್ಷ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ಅವನತಿಗೆ ಕಾರಣವಾಗಿದ್ದರು.

ಇದ್ರಿಂದ ಜೆಡಿಎಸ್, ವಿಶ್ವನಾಥ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದು, ಇದೀಗ ಹುಣಸೂರು ಕ್ಷೇತ್ರಕ್ಕೆ ಬೇರೆ ಅಭ್ಯರ್ಥಿಯ ಹುಡುಕಾಟದಲ್ಲಿದೆ.

click me!