ಮಂಗಳೂರು-ದೆಹಲಿ ಮಧ್ಯೆ ನೇರ ವಿಮಾನಯಾನ ಆರಂಭ

By Shrilakshmi ShriFirst Published Aug 5, 2019, 10:45 AM IST
Highlights

ಮಂಗಳೂರು-ದೆಹಲಿ ಮಧ್ಯೆ ಭಾನುವಾರದಿಂದ ನೇರ ವಿಮಾನಯಾನ ಪುನಃ ಆರಂಭ | ಆ. 04 ರಿಂದ ವಿಮಾನಯಾನ ಆರಂಭ 

ಮಂಗಳೂರು (ಆ. 05): ಮಂಗಳೂರು-ದೆಹಲಿ ಮಧ್ಯೆ ಭಾನುವಾರದಿಂದ ನೇರ ವಿಮಾನಯಾನ ಪುನಃ ಆರಂಭಗೊಂಡಿದ್ದು, ವಯಾ ಬೆಂಗಳೂರು ಅಥವಾ ಮುಂಬೈ ಮೂಲಕ ತೆರಳಬೇಕಾದ ಪ್ರಮೇಯ ತಪ್ಪಿದಂತಾಗಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಲ್ದಾಣ ಪ್ರಾಧಿಕಾರ ನಿರ್ದೇಶಕ ವಿ.ವಿ.ರಾವ್‌ ಅವರು ಪ್ರಯಾಣಿಕರೊಬ್ಬರಿಗೆ ಬೋರ್ಡಿಂಗ್‌ ಪಾಸ್‌ನ್ನು ಹಸ್ತಾಂತರಿಸುವ ಮೂಲಕ ಮೊದಲ ದೆಹಲಿ ನೇರ ವಿಮಾನಯಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಸ್ಪೈಸ್‌ ಜೆಟ್‌ ಪ್ರಾದೇಶಿಕ ವ್ಯವಸ್ಥಾಪಕ ನವಲ್‌ ಕಿಶೋರ್‌, ಸ್ಟೇಷನ್‌ ಮೆನೇಜರ್‌ ಸಂತೋಷ್‌, ಕರ್ತವ್ಯ ಅಧಿಕಾರಿ ಆಶಿತ್‌ ರಾಜ್‌ ಇದ್ದರು. ಈ ಸ್ಪೈಸ್‌ಜೆಟ್‌ ಪ್ರತಿದಿನ ಬೆಳಗ್ಗೆ 6.15ಕ್ಕೆ ಮಂಗಳೂರಿನಿಂದ ಹೊರಟು 8.55ಕ್ಕೆ ದೆಹಲಿ ತಲುಪಲಿದೆ.

ದೆಹಲಿಯಿಂದ ರಾತ್ರಿ 8.55ಕ್ಕೆ ಹೊರಟು 11.25ಕ್ಕೆ ಮಂಗಳೂರು ತಲುಪಲಿದೆ. ಕೆಲ ವರ್ಷಗಳ ಹಿಂದೆ ಮಂಗಳೂರಿನಿಂದ ದೆಹಲಿಗೆ ನೇರ ವಿಮಾನ ಯಾನ ಸೇವೆ ಇದ್ದರೂ ಬಳಿಕ ಅದು ಸ್ಥಗಿತಗೊಂಡಿತ್ತು.

click me!