
ಮ್ಯಾನ್ಮಾರ್‌ನಲ್ಲಿ 99 ದಶಲಕ್ಷ ವರ್ಷಗಳ ಹಿಂದೆ ಸಂರಕ್ಷಿಸಿಡಲಾಗಿದ್ದ ಡೈನೋಸರ್ ಬಾಲವನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. ಡೈನೋಸರ್ ಪಳೆಯುಳಿಕೆ ಪುರಾವೆಗಳಿಂದ ಈವರೆಗೆ ಪತ್ತೆಹಚ್ಚಲಾಗದ ಅಂಶಗಳಾದ ಡೈನೋಸರ್ ಗರಿಯ ರಚನೆ ಮತ್ತು ಅವುಗಳ ಉಗಮದ ಕುರಿತು ಈ ಬಾಲದ ಅಧ್ಯಯನದಿಂದ ಅರಿತುಕೊಳ್ಳಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಡೈನೋಸರ್ ಬಾಲ ಮತ್ತು ಬೆನ್ನು ಮೂಳೆ ಸೇರಿ ಒಟ್ಟು 8 ಅಂಶಗಳನ್ನು 3ಡಿ ಮೈಕ್ರೊಸ್ಕೋಪಿಕ್‌ನಲ್ಲಿ ಸಂರಕ್ಷಿಸಿಡಲಾಗಿದೆ ಎಂದು ಕೆನಡಾದ ರಾಯಲ್ ಸಾಸ್ಕಟ್ಚೆವಾನ್ ಮ್ಯೂಸಿಯಂನ ರ್ಯಾನ್ ಮೆಕೆಲ್ಲರ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.