ಎಂಬಿಪಿ, ಡಿಕೆಶಿ ಹಿಂದೆ ಹಾಕಿ ದಿನೇಶ್ ಕೆಪಿಸಿಸಿ ಅಧ್ಯಕ್ಷಗಿರಿ ಪಡೆದ ಕತೆ

First Published Jul 4, 2018, 5:27 PM IST
Highlights

ಸಚಿವ ಸ್ಥಾನ ತಪ್ಪಿದ್ದಲ್ಲೆ ಅತೃಪ್ತಿಯ ಬಾವುಟ ಹಾರಿಸಿದ್ದ ಲಿಂಗಾಯತ ಎಂ.ಬಿ.ಪಾಟೀಲರಿಗೆ ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಕೈ ತಪ್ಪಿದೆ. ಎಂ.ಬಿ.ಪಾಟೀಲ್ ಗೂ ಕೆಪಿಸಿಸಿ ಹುದ್ದೆ ನೀಡಲು ರಾಹುಲ್ ಗಾಂಧಿ ಅವರೇ ಮುಂದಾಗಿಲ್ಲ. ಹಾಗಾದರೆ ಅಷ್ಟಕ್ಕೂ ಪಾಟೀಲರಿಗೆ ಮತ್ತು ರೇಸ್ ನಲ್ಲಿದ್ದ ಇತರರಿಗೆ ಹುದ್ದೆ ತಪ್ಪಲು ಕಾರಣ ಏನು?  ದಿನೇಶ್ ಗುಂಡೂರಾವ್ ಗೆ ಪಟ್ಟ ಒಲಿಯಲು ಏನು ಕಾರಣ ಇಲ್ಲಿದೆ. 

ಬೆಂಗಳೂರು[ಜು.4]  ಅಂತೂ-ಇಂತು ಕೆಪಿಸಿಸಿಗೆ ನೂತನ ಸಾರಥಿ ನೇಮಕವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕೃಪಾಕಟಾಕ್ಷದಿಂದ ದಿನೇಶ್ ಗುಂಡೂರಾವ್ ಗೆ ಪದವಿ ಒಲಿದು ಬಂದಿದೆ. ಹಾಗಾದರೆ ರೇಸ್ ನಲ್ಲಿದ್ದ ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ಡಿ.ಕೆ.ಶಿವಕುಮಾರ್ ಗೆ ಪದವಿ ಕೈತಪ್ಪಲು ಕಾರಣವಾದದ್ದಾದರೂ ಏನು?

ತಾಳ್ಮೆ, ಸಹನಶೀಲತೆ ಇಲ್ಲದ ಸಿಟ್ಟಿನ ವ್ಯಕ್ತಿತ್ವ ಎಂ.ಬಿ ಪಾಟೀಲರದ್ದು ಎಂಬ ಅಂಶ ಅವರಿಗೆ ಮುಳುವಾಯಿತು.  ಜತೆಗೆ ಲಿಂಗಾಯತ ಧರ್ಮ ವಿಭಜನೆ ಯತ್ನಿಸಿ ಮತ ಬ್ಯಾಂಕ್ ಗೆ ಧಕ್ಕೆ ತಂದ ಆರೋಪ, ರಾಜ್ಯ ಕಾಂಗ್ರೆಸ್ ಪಕ್ಷದ ಕೆಲವು ನಾಯಕರ ಮಾತಿಗೆ ಮಣೆ ಹಾಕದ ಸಂದರ್ಭ ಪಾಟೀಲರ ಸಾಧ್ಯತೆ ಕಡಿಮೆ ಮಾಡಿತು.

Latest Videos

ರಾಹುಲ್ ಒಂದು ಮಾತಿಗೆ ಬಂಡಾಯವೆದ್ದ ಎಂಬಿ ಪಾಟೀಲ್ ಥಂಡಾ

ಡಿಕೆಶಿ ನೇಮಸಿಲು ರಾಹುಲ್ ಗಾಂಧಿಯೇ ಹಿಂದೇಟು ಹಾಕಿದರು. ಆದಾಯ ತೆರಿಗೆ ದಾಳಿ ಪ್ರಕರಣ, ಡಾಮಿನೆಂಟ್ ವ್ಯಕ್ತಿತ್ವ, ಈಗಾಗಲೇ ಹೊಂದಿರುವ ಸಚಿವ ಸ್ಥಾನ ಡಿಕೆಶಿಗೆ ಅಡ್ಡಗಾಲಾಯಿತು.  ಅಲ್ಲದೇ ಡಿಕೆಶಿ ನೇಮಕಕ್ಕೆಸಿದ್ದರಾಮಯ್ಯ, ಖರ್ಗೆ, ಡಾ.ಜಿ.ಪರಮೇಶ್ವರ್ ವಿರೋಧಿಸಿದ್ದರು.

ಸಿದ್ದರಾಮಯ್ಯ ವರಿಗೆ ಅಧ್ಯಕ್ಷರಾಗುವಂತೆ ರಾಹುಲ್ ಕೇಳಿಕೊಂಡರೂ ಹುದ್ದೆ ನನಗೆ ಬೇಡ, ಈಗಷ್ಟೇ ಸಿಎಂ ಸ್ಥಾನದಿಂದ ಇಳಿದಿದ್ದೇನೆ, ಮತ್ತೆ ಪಕ್ಷ ಸಂಘಟನೆ ಸಾಹಸ ಕಷ್ಟಕಷ್ಟ. ರಾಜ್ಯಾದ್ಯಂತ ಸಂಚರಿಸಿ ಪಕ್ಷ ಸಂಘಟನೆ ಮಾಡುವ ಆಸಕ್ತಿ ಇಲ್ಲ ಎಂದು ಪರೋಕ್ಷವಾಗಿ ಹೇಳಿದ್ದರು.

ಸಿದ್ದರಾಮಯ್ಯಗೆ ಸಿಕ್ಕಿದ್ದು ಲಾಸ್ಟ್ ಬೆಂಚ್... ಕಾರಣ ಏನು?

ಎಚ್.ಕೆ.ಪಾಟೀಲ್ ಗೆ ಸಿದ್ದರಾಮಯ್ಯ ಅಡ್ಡಿ..!
H.K.ಪಾಟೀಲ್ ಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡಲು ಸಿದ್ದು ವಿರೋಧಿಸಿದ್ದರು. ಲಿಂಗಾಯತ ಸಮುದಾಯದ ಕೋಟಾದಲ್ಲಿ ರೇಸ್ ನಲ್ಲಿದ್ದ H.K.ಪಾಟೀಲ್ ಹೆಸರಿತ್ತು. ಆದರೆ ಜಾತಿ ಸಮುದಾಯ ಎನ್ನುವುದಕ್ಕಿಂತ ಪಕ್ಷ ಸಂಘಟನೆ ಮತ್ತು ಯುವ ನಾಯಕತ್ವಕ್ಕೆ ಆದ್ಯತೆ ನೀಡಿದ ಹೈಕಮಾಂಡ್  ದಿನೇಶ್ ಅವರನ್ನು ನೇಮಕ ಮಾಡಿತು.

ದಿನೇಶ್ ಗೆ ಒಲಿದು ಬಂದ ಪಟ್ಟ
ಎಲ್ಲ ನಾಯಕರೊಂದಿಗೆ ಉತ್ತಮ ಬಾಂಧವ್ಯ, ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ್ ಗೆ ಡಿಸಿಎಂ ಹುದ್ದೆ ನೀಡಿದ್ದು, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿಕೆಶಿ, ಪರಮೇಶ್ವರ್ ಗೆ ಬೇಕಾದ ವ್ಯಕ್ತಿ ಈ ಎಲ್ಲ ಕಾರಣಗಳು ದಿನೇಶ್ ಅವರಿಗೆ ಪಟ್ಟ ಒಲಿದು ಬರುವಂತೆ ಮಾಡಿತು. ಮುಂದಿನ ಲೋಕಸಭಾ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ ಈ ತೀರ್ಮಾನ ತೆಗೆದುಕೊಂಡಿದ್ದು ಅನೇಕ ದಿನಗಳ ಪ್ರಶ್ನೆಗೆ ಉತ್ತರ ನೀಡಿದೆ.

click me!