ಇಂದು ಈ ರಾಶಿಗೆ ಲಾಭ ಹರಿದು ಬರಲಿದೆ

By Web DeskFirst Published 10, Sep 2018, 6:36 AM IST
Highlights

ಇಂದು ಈ ರಾಶಿಗೆ ಲಾಭ ಹರಿದು ಬರಲಿದೆ

ಇಂದು ಈ ರಾಶಿಗೆ ಲಾಭ ಹರಿದು ಬರಲಿದೆ

ಮೇಷ
ವ್ಯವಹಾರದಲ್ಲಿ ನಿರೀಕ್ಷಿತ ಲಾಭವು ಸಿಗಲಿದೆ.
ಆದರೂ ಅದರಿಂದಲೇ ನಿಮ್ಮ ಸಾಲಗಳು
ತೀರುವುದಿಲ್ಲ, ಕಷ್ಟಪಟ್ಟರಷ್ಟೇ ಅದು ಸಾಧ್ಯ.

ವೃಷಭ
ಓದುವವರಿಗೆ ಬಿಡುವು ಇರುವುದಿಲ್ಲ. ಸ್ವಲ್ಪ
ದಿನಗಳು ಕಷ್ಟಪಟ್ಟರೆ ಒಳ್ಳೆಯ ದಿನಗಳು
ಬರಲಿವೆ. ಶ್ರಮಕ್ಕೆ ತಕ್ಕ ಫಲ ಈಗ ಸಿಗಲಿದೆ.

ಮಿಥುನ
ಗರ್ಭಿಣಿ ಮಹಿಳೆಯರು ಆರೋಗ್ಯದ ಕಡೆ
ಹೆಚ್ಚು ಗಮನ ನೀಡಿ. ಉದ್ಯೋಗಸ್ಥರ ಕೆಲಸ
ದಲ್ಲಿ ಪ್ರಗತಿ. ಏಕಾಗ್ರತೆಯನ್ನು ರೂಢಿಸಿಕೊಳ್ಳಿ.

ಕಟಕ
ಖರ್ಚಿನ ಮೇಲೆ ಹಿಡಿತವಿರಲಿ. ಅಪರಿಚಿತ
ವ್ಯಕ್ತಿಗಳ ಪರಿಚಯವಾಗಲಿದೆ. ಆರೋಗ್ಯ
ಸಮಸ್ಯೆಗೆ ಪರಿಹಾರ ದೊರೆಯಲಿದೆ.

ಸಿಂಹ
ಧನಾತ್ಮಕವಾದ ಆಲೋಚನೆಗಳಿಂದ ನಿಮ್ಮ
ಕೆಲಸಗಳಲ್ಲಿ ಈಗ ಯಶಸ್ಸು ದೊರೆಯಲಿದೆ.
ಹೆಚ್ಚಿನ ನೆಮ್ಮದಿಯನ್ನು ಕಾಣಲಿದ್ದೀರಿ.

ಕನ್ಯಾ
ಹೊಸ ಕಟ್ಟಡಗಳ ಕೆಲಸಗಳು ಪ್ರಗತಿಯಲ್ಲಿದೆ.
ಅದಕ್ಕೆ ಬೇಕಾದ ದುಡ್ಡಿಗೆ ಅಲ್ಪ ಸ್ವಲ್ಪ ಪರದಾಡ
ಬೇಕಾದೀತು. ಆದರೂ ತೊಂದರೆಯಾಗದು.

ತುಲಾ 
ಕೆಲ ಸಮಯದಿಂದ ಅಂದುಕೊಂಡಿದ್ದ ಕೆಲಸ
ಇಂದು ಕೈಗೂಡಲಿವೆ. ಈ ದಿನ ಮಹಿಳೆಯರು
ದೇವತಾ ಕಾರ್ಯದಲ್ಲಿ ತೊಡಗಿದರೆ ಒಳಿತು.

ವೃಶ್ಚಿಕ
ಅನಗತ್ಯ ಚಿಂತೆಗಳು ಈ ದಿನಗಳಲ್ಲಿ ದೂರಾ
ಗಲಿವೆ. ಸ್ಥಳ ಬದಲಾವಣೆಯ ಸಾಧ್ಯತೆ ಇದೆ.
ನಿಮ್ಮ ಧೈರ್ಯವೇ ನಿಮ್ಮನ್ನು ಕಾಯುವುದು. 

ಧನುಸ್ಸು
ಅನುಚಿತ ಮಾತುಗಳಿಂದ ಈಗ ವಿವಾದಗಳಲ್ಲಿ
ಸಿಲುಕುವ ಸಂಭವವಿದೆ. ನಿಮ್ಮ ಮಾತಿನಲ್ಲಿ
ತೂಕವಿರಲಿ. ಶುಭ ಸಮಾಚಾರವೂ ಸಿಗಲಿದೆ.

ಮಕರ
ಪುರಾತನ ಆಸ್ತಿಯ ಕ್ರಯ-ವಿಕ್ರಯಗಳ ಬಗ್ಗೆ
ಮಾತುಕತೆ ನಡೆಯಲಿವೆ. ಆಯವ್ಯಯದಲ್ಲಿ
ಏರುಪೇರೂ ಆಗಬಹುದು. ಜಾಗ್ರತೆಯಾಗಿರಿ.

ಕುಂಭ
ನಿಮ್ಮ ಒಳ್ಳೆಯ ವಿಚಾರಗಳಿಂದ ನಿಮಗೆ ಆದರ
ಆತಿಥ್ಯಗಳು ನಿಮ್ಮದಾಗಲಿವೆ. ಸುಭೋಜನ
ಸವಿಯುವ ಅವಕಾಶವಿದೆ. ಕ್ಲುಪ್ತವಾಗಿ ತಿನ್ನಿರಿ.

ಮೀನ 
ನಿಮ್ಮ ನೆರೆಯವರು ಈಗ ನಿಮ್ಮ ಹಣಕಾಸಿನ
ವಿಷಯ ತಿಳಿದು ನೆರವಾಗಲಿದ್ದಾರೆ. ಅವರೇ
ಬಂದು ನಿಮಗೆ ಸಹಕಾರ ಹಸ್ತ ನೀಡಲಿದ್ದಾ

Last Updated 19, Sep 2018, 9:17 AM IST