
ನವದೆಹಲಿ[ಸೆ.9] ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, 48 ವರ್ಷಗಳ ಕಾಲ ಒಂದು ಕುಟುಂಬ ಮಾಡಿದ ಸಾಧನೆ ಹಾಗು ಪ್ರಸಕ್ತ ಸರಕಾರ ಕಳೆದ 48 ತಿಂಗಳಲ್ಲಿ ಮಾಡಿದ ಮಾಡಿದ ಸಾಧನೆಗಳನ್ನು ತುಲನೆ ಮಾಡಿ ನೋಡಬೇಕು ಎಂದು ಪ್ರಧಾನಿ ಹೇಳಿದ್ದಾರೆ ಎಂದರು.
ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ನುಡಿನಮನ ಸಲ್ಲಿಸಿ, ಅಜೇಯ ಭಾರತ, ಅಟಲ ಬಿಜೆಪಿ ಎನ್ನುವ ಮೂಲಕ ದೇಶವನ್ನು ಯಾರಿಂದಲೂ ಒಡೆಯಲು ಬಿಡಬಾರದು ಮತ್ತು ಸಿದ್ಧಾಂತಗಳಿಗೆ ಬದ್ಧರಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ ಎಂಬ ವಿವರ ನೀಡಿದರು.
ಮಹಾಘಟಬಂಧನದ ಹೆಸರಿನಲ್ಲಿ ಬಿಜೆಪಿಯ ಎದುರು ಎಲ್ಲ ಪಕ್ಷಗಳು ನಿಲ್ಲುತ್ತಿವೆ. ವೈರಿಗಳೆಲ್ಲ ಒಂದಾಗಿ ನಮ್ಮ ಎದುರಿಗೆ ನಿಂತಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಜನತೆ ಕೈ ಹಿಡಿಯಲಿದೆ. ಜನರ ನಂಬಿಕೆ ಉಳಿಸಿಕೊಂಡು ಮುಂದೆ ಸಾಗುತ್ತೇವೆ ಎಂಬ ಭಾಷಣದ ಸಾರವನ್ನು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.