ದಿನಭವಿಷ್ಯ: ವೃಶ್ಚಿಕ ರಾಶಿಯವರಿಗೆ ಹಣಕಾಸು ವ್ಯವಹಾರ ನಡೆಸುವಾಗ ಸ್ವಲ್ಪ ಎಚ್ಚರ; ಉಳಿದ ರಾಶಿಯವರ ಭವಿಷ್ಯ ಹೀಗಿದೆ ನೋಡಿ

Published : Jan 10, 2018, 07:54 AM ISTUpdated : Apr 11, 2018, 01:07 PM IST
ದಿನಭವಿಷ್ಯ:  ವೃಶ್ಚಿಕ ರಾಶಿಯವರಿಗೆ ಹಣಕಾಸು ವ್ಯವಹಾರ ನಡೆಸುವಾಗ ಸ್ವಲ್ಪ ಎಚ್ಚರ; ಉಳಿದ ರಾಶಿಯವರ ಭವಿಷ್ಯ ಹೀಗಿದೆ ನೋಡಿ

ಸಾರಾಂಶ

ಜನವರಿ 10, 2018ರ ದಿನಭಚವಿಷ್ಯ ಹೀಗಿದೆ ನೋಡಿ...

ಜನವರಿ 10, 2018ರ ದಿನಭಚವಿಷ್ಯ ಹೀಗಿದೆ ನೋಡಿ...

ಮೇಷ:

ಮನೆಯಲ್ಲಿ ನೆಮ್ಮದಿ ಸಿಗಲಿದೆ. ಆಫೀಸಿನ ಕೆಲಸಗಳಲ್ಲಿ ತೃಪ್ತಿ ಸಿಗಲಿದೆ. ಇಂದು ಸ್ವಲ್ಪ ಗೊಂದಲಗಳು ಸೃಷ್ಟಿಯಾಗಲಿವೆ. ಜೋಕೆ.

ವೃಷಭ:

ಹೊಸ ಥರದ ಆಲೋಚನೆಗಳು ನಿಮ್ಮನ್ನು ಹುರಿದುಂಬಿಸಲಿದೆ. ಹಾಗಾಗಿ ಮಾನಸಿಕ ನೆಮ್ಮದಿಯನ್ನು ಹೊಂದುತ್ತೀರಿ.

ಮಿಥುನ:

ನೀವಂದುಕೊಂಡಿದ್ದನ್ನು ಸಾಧಿಸುವಿರಿ. ಕುಟುಂಬದೊಂದಿಗೆ ದೇಗುಲ ದರ್ಶನ. ದೇವಿಯ ಕೃಪೆಯು ಒಳಿತನ್ನೇ ಮಾಡಲಿದೆ.

ಕಟಕ:

ನಿಮ್ಮ ವಿದೇಶ ಪ್ರಯಾಣಕ್ಕೆ ಎದುರಾದ ತೊಂದರೆಗಳು ಸದ್ಯದಲ್ಲಿ ದೂರವಾಗಲಿವೆ. ಹಣಕಾಸಿನ ವಿಷಯದಲ್ಲಿ ಎಚ್ಚರವಿರಲಿ.

ಸಿಂಹ:

ಲೇವಾದೇವಿ ವ್ಯವಹಾರದಲ್ಲಿ ಸಮಸ್ಯೆ ಬರಬಹುದು. ವಿದ್ಯಾರ್ಥಿಗಳಿಗೆ ಪ್ರಗತಿಯ ಕಾಲ. ಕನಸು ಸಾಕಾರವಾಗುವ ದಿನವಿದು.

ಕನ್ಯಾ:

ಪ್ರಯಾಣದ ಆಲಸ್ಯ ಹೆಚ್ಚಿದೆ. ವಿಶ್ರಾಂತಿ ಅಗತ್ಯ. ಕಷ್ಟದಲ್ಲಿರುವವರಿಗೆ ನಿಮ್ಮದೇ ಮಿತಿಯಲ್ಲಿ ಸಹಾಯ ಮಾಡಲು ಪ್ರಯತ್ನಿಸಿ.

ತುಲಾ:

ವಾಸ್ತುದೋಷದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಪರಿಹಾರಕ್ಕಾಗಿ ಮನೆ ದೇವರಲ್ಲಿ ಮೊರೆ ಹೋದರೆ ಸಾಕು. ಎಲ್ಲವೂ ಶುಭವಾಗಲಿದೆ.

ಧನುಸ್ಸು

ಯಾರದೋ ಮಾತುಗಳಿಂದ ಉದ್ವಿಗ್ನರಾಗದೆ ಸಮಚಿತ್ತದಿಂದ ವರ್ತಿಸಿ. ಸಂಭ್ರಮದಿಂದಿರಿ. ಮುಂದಿನ ದಿನಗಳು ಒಳ್ಳೆಯದಿವೆ ಕಾಯಿರಿ.

ವೃಶ್ಚಿಕ:

ನಿಮ್ಮ ಸೃಜನಾತ್ಮಕ ಕಲ್ಪನೆಯನ್ನು ಸೂಕ್ತ ನಿಟ್ಟಿನಲ್ಲಿ ಬಳಸಿ. ಕಲಾವಿದರಿಗೆ ಒಳ್ಳೆಯ ದಿನ. ಹಣಕಾಸಿನ ವಹಿವಾಟುಗಳಲ್ಲಿ ನಷ್ಟ.

ಮಕರ:

ಹಣದ ವಿಚಾರದಲ್ಲಿ ಸ್ವಲ್ಪ ಜಾಗ್ರತೆಯಿಂದ ಇರಿ. ಇಲ್ಲದಿದ್ದರೆ ಅನಗತ್ಯ ಸನ್ನಿವೇಶಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ. ಜೋಪಾನ.

ಕುಂಭ:

ವಿದ್ಯಾರ್ಥಿಗಳಿಗೆ ಒಳ್ಳೆಯ ದಿನವಿದಾಗಿದ್ದು ಸ್ವಲ್ಪ ಪರಿಶ್ರಮ ಪಟ್ಟರೂ ಸಾಕು ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದಾಗಿದೆ.

ಮೀನ:

ಮನಸ್ಥಾಪಕ್ಕೆ ಒಳಗಾಗದಿರಿ. ಶಾಂತಚಿತ್ತರಾಗಿದ್ದು ಕೆಲಸದಲ್ಲಿ ತೊಡಗಿ. ನಿಮ್ಮದೇ ಹೊಣೆಗಾರಿಕೆಗೆ ಹೆದರದೇ ಮುನ್ನುಗ್ಗಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ಅಪ್ಪ- ಅಮ್ಮನ ವಿಚ್ಚೇಧನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!
ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?