ಬಿಜೆಪಿಗೆ ಮತ್ತೆ ಆಘಾತ: ಪಕ್ಷಕ್ಕೆ ಗುಡ್ ಬೈ ಹೇಳಿದ ಇಬ್ಬರು ನಾಯಕರು..!

Published : Nov 30, 2018, 03:20 PM IST
ಬಿಜೆಪಿಗೆ ಮತ್ತೆ ಆಘಾತ:  ಪಕ್ಷಕ್ಕೆ ಗುಡ್ ಬೈ ಹೇಳಿದ ಇಬ್ಬರು ನಾಯಕರು..!

ಸಾರಾಂಶ

ರಾಜಸ್ಥಾನದ ಬಿಜೆಪಿ ಮುಖಂಡರಾಗಿದ್ದ ಮನ್ವೇಂದ್ರ ಸಿಂಗ್ ಮತ್ತು ಹರೀಶ್ ಮೀನಾ ಅವರ ರಾಜೀನಾಮೆಯಿಂದ ಅಘಾತಕ್ಕೊಳಗಾಗಿದ್ದ ಬಿಜೆಪಿಗೆ ಮತ್ತೊಂದು ಆಘಾತ ಎದುರಾಗಿದೆ.

ಭುವನೇಶ್ವರ್, (ನ.30): ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನವೇ ಬಿಜೆಪಿಗೆ ಆಘಾತವಾಗಿದೆ. ರಾಜಸ್ಥಾನದ ಬಿಜೆಪಿ ಮುಖಂಡ ರಾಜೀನಾಮೆ ಪರ್ವ ಮುಗಿದಿದ್ದು, ಇದೀಗ ಒಡಿಶಾ ಬಿಜೆಪಿಯ ಇಬ್ಬರು ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಕೇಂದ್ರದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಒಡಿಶಾ ಬಿಜೆಪಿ ಮುಖಂಡ ದಿಲೀಪ್ ರೇ ಹಾಗೂ ಇನ್ನೋರ್ವ ನಾಯಕ ಬಿಜೋಯ್ ಮಹಾಪಾತ್ರಾ ಅವರೂ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.

ಇಬ್ಬರು ನಾಯಕರೂ ತಮ್ಮ ಜಂಟಿ ರಾಜೀನಾಮೆ ಪತ್ರಕ್ಕೆ ಸಹಿ ಮಾಡಿ ಅದನ್ನು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ಕಳಿಸಿದ್ದಾರೆ.

ಕ್ಷೇತ್ರದ ಜನರ ವಿಶ್ವಾಸ ಗಳಿಸಲು ಮತ್ತು ಅವರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ನಾನು ವಿಫಲನಾಗಿದ್ದೇನೆ. ಆದ್ದರಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದೇನೆ ಎಂದು  ದಿಲೀಪ್ ರೇ ರಾಜೀನಾಮೆಯ ಪತ್ರದಲ್ಲಿ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

5 State Assembly Election results 2026 Live: ಇಂದು ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶ; ಯಾರಿಗೆ ಗೆಲುವು? ಯಾರಿಗೆ ಸೋಲು?
Tamil Nadu Election Results: ಸ್ಟಾಲಿನ್, ಎಡಪ್ಪಾಡಿ ಅಥವಾ ವಿಜಯ್.. ಯಾರಾಗ್ತಾರೆ ತಮಿಳು ನಾಡಿನ ಅಧಿಪತಿ?