ನೀವಲ್ಲ ಏಕಾಂಗಿ, ನಾನಿದ್ದೀನಿ ಮಗನಾಗಿ: ಹುತಾತ್ಮನ ತಂದೆಗೆ ಸೈನಿಕನ ಸಾಂತ್ವನ

By Web DeskFirst Published Nov 29, 2018, 4:04 PM IST
Highlights

ಜಮ್ಮು ಕಾಶ್ಮೀರದ ಶೋಪಿಯಾಂ ಜಿಲ್ಲೆಯಲ್ಲಿ ಭಾನುವಾರ ನಡೆದ ಆಪರೇಷನ್ ಆಲೌಟ್‌ನಲ್ಲಿ ಈ ಹಿಂದೆ ಉಗ್ರನಾಗಿದ್ದ, ಬಳಿಕ ಶರಣಾಗಿ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದ, ನಜೀರ್ ಅಹ್ಮದ್ ವಾನಿ ಹುತಾತ್ಮರಾಗಿದ್ದಾರೆ. ಸದ್ಯ ಭಾರತೀಯ ಸೇನೆಯು ಭಾರತೀಯ ಸೇನೆಯು ಇವರ ತಂದೆಯ ಮನಕಲುಕುವ ಫೋಟೋ ಒಂದನ್ನು ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ಜಮ್ಮು ಕಾಶ್ಮೀರದ ಶೋಪಿಯಾಂ ಜಿಲ್ಲೆಯಲ್ಲಿ ಭಾನುವಾರ ನಡೆದ ಆಪರೇಷನ್ ಆಲೌಟ್‌ನಲ್ಲಿ ಭಾರತೀಯ ಸೇನೆಯ ಯೋಧನೊಬ್ಬ ಹುತತ್ಮರಾಗಿದ್ದಾರೆ. ತ್ರಿವರ್ಣ ಧ್ವಜದಲ್ಲಿ ಸುತ್ತಿದ್ದ ಆ ಯೋಧನ ಪಾರ್ಥೀವ ಶರೀರ ಹುಟ್ಟೂರಿಗೆ ಕರೆತರುತ್ತಿದ್ದಂತೆಯೇ ಹಳ್ಳಿಯ ಜನರೆಲ್ಲರ ಕಣ್ಣಂಚಿನಲ್ಲಿ ಕಂಬನಿ ತುಂಬಿತ್ತು. ಅತ್ತ ಮಗ ನಜೀರ್ ಅಹ್ಮದ್ ವಾನಿಯ ಪಾರ್ಥೀವ ಶರೀರ ನೋಡುತ್ತಿದ್ದಂತೆಯೇ ಾವರೆಗೂ ತನ್ನೆಲ್ಲಾ ನೋವನ್ನು ಹಿಡಿದಿಟ್ಟುಕೊಂಡಿದ್ದ ತಂದೆ ಅಸಹಾಯಕರಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸದ್ಯ ಈ ಫೋಟೋ ಭಾರತೀಯ ಸೇನೆಯ ಅಧಿಕೃತ ಟ್ವಿಟರ್ ಅಕೌಂಟ್‌ನಲ್ಲಿ ಶೇರ್ ಮಾಡಲಾಗಿದ್ದು, 'ನೀವು ಏಕಾಂಗಿಯಲ್ಲ, ನಾವು ನಿಮ್ಮೊಂದಿಗಿದ್ದೇವೆ' ಎಂಬ ಶಿರೋನಾಮೆ ನೀಡಲಾಗಿದೆ. ಮನಕಲುಕುವ ಈ ಫೋಟೋ ಸದ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ

A serving officer consoling father of Lance Naik Nazir Ahmad of 34 Rashtriya Rifles, who lost his life fighting terrorists in in Kulgam district of J&K. pic.twitter.com/k2Yklmf1Ev

— ADG PI - INDIAN ARMY (@adgpi)

ಹುತಾತ್ಮ ಯೋಧ ಕುಲ್‌ಗಾಮ್ ತಾಲೂಕಿನ ಚೆಕಿ ಅಶ್ಮೂಜಿ ಹಳ್ಳಿಯ ನಿವಾಸಿ. ಇನ್ನು ಸೇನಾ ವಕ್ತಾರ ಪ್ರತಿಕ್ರಿಯಿಸುತ್ತಾ ಲ್ಯಾನ್ಸ್ ನಾಯಕ್ ನಜೀರ್ ಅಹ್ಮದ್ ವಾನಿಯವರಿಗೆ ಹೆಂಡತಿ ಹಾಗೂ ಇಬ್ಬರು ಮಕ್ಕಳಿದ್ದಾರೆಂದು ತಿಳಿಸಿದ್ದಾರೆ.  ನಜೀರ್ 2004ರಲ್ಲಿ ಟೆರಿಟೋರಿಯನ್ ಆರ್ಮಿ ವಿಭಾಗಕ್ಕೆ ಸೇರ್ಪಡೆಯಾಗಿ ತಮ್ಮ ವೃತ್ತಿ ಬದುಕು ಆರಂಭಿಸಿದ್ದರು. ಸೋಮವಾರದಂದು ಅವರ ಅಂತಿಮ ಕ್ರಿಯೆ ನಡೆದಿದ್ದು, ಇದಕ್ಕೂ ಮುನ್ನ 21 ಕುಶಾಲತೋಪು ಸಿಡಿಸುವ ಮೂಲಕ ಸೇನಾ ಗೌರವ ಸಲ್ಲಿಸಲಾಗಿದೆ.

ಹುತಾತ್ಮ ನಜೀರ್ ಅಹ್ಮದ್ ಜೀವನ ಕಥೆ ನಿಜಕ್ಕೂ ಅಚ್ಚರಿ ಮೂಡಿಸುವಂತಹುದ್ದು. ಒಂದು ಸಮಯದಲ್ಲಿ ಉಗ್ರಗಾಮಿಯಾಗಿದ್ದ ಅವರು ಆತ್ಮ ಸಮರ್ಪಣೆ ಮಾಡಿ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದರು. 2007ರಲ್ಲಿ ಅವರು ಸೇನಾ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಇದನ್ನೂ ಓದಿ: ಅಂದು ಉಗ್ರ, ಇಂದು ಭಾರತಕ್ಕಾಗಿ ಬಲಿದಾನ: ಹೀಗೋರ್ವ ಸೈನಿಕನ ಕಥೆ!

ನಜೀರ್ ಜೀವನ ಕಥೆ ಉಗ್ರಗಾಮಿಯೊಬ್ಬ ದೇಶಭಕ್ತನಾದ ಹಾಗೂ ಸೇನೆಗೆ ಭರ್ತಿಯಾಗಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ತನ್ನ ಜೀವವನ್ನೇ ತ್ಯಾಗ ಮಾಡಿದ್ದಾಗಿದೆ. ಭಯೋತ್ಪಾದನೆ ತೊರೆದು ಭಾರತೀಯ ಸೇನೆಗೆ ಸೇರ್ಪಡೆಗೊಂಡ ನಜೀರ್ ಅಹ್ಮದ್ ವಾನಿ ಓರ್ವ ಅತ್ಯುತ್ತಮ ಯೋಧರಾಗಿದ್ದರು. 

General Bipin Rawat & all ranks salute supreme sacrifice of Lance Naik Nazir Ahmad Wani, SM* & offer sincere condolences to the family. pic.twitter.com/vYpYEwseOu

— ADG PI - INDIAN ARMY (@adgpi)

ಇನ್ನು ದಕ್ಷಿಣ ಕಾಶ್ಮೀರದಲ್ಲಿರುವ ಕುಲ್ ಗಾಂ ಉಗ್ರರ ಕೋಟೆ ಎಂದೇ ಖ್ಯಾತಿ ಪಡೆದಿದೆ. ಹೀಗಾಗಿ ಇಲ್ಲಿ ಭಾರತೀಯ ಸೇನೆಯು ದಾಳಿ ನಡೆಸಿದ್ದು, ಈ ವೇಳೆ ಉಗ್ರರು ಯೋಧರ ಮೇಲೆ ಗುಂಡು ಹಾರಿಸಿ ಪ್ರತಿದಾಳಿ ನಡೆಸಿದ್ದರು.
 

click me!