
ತಿರುವನಂತಪುರ(ಜು.10): ಈ ವರ್ಷದ ಫೆಬ್ರವರಿಯಲ್ಲಿ ನಡೆದ ನಟಿಯೊಬ್ಬಳ ಅಪಹರಣ ಹಾಗೂ ಲಯಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂನ ಖ್ಯಾತ ನಟ ದಿಲೀಪ್'ನನ್ನು ಬಂಧಿಸಲಾಗಿದೆ.
ಕಳೆದ ವಾರ ಪೊಲೀಸರು ನಟ ದಿಲೀಪ್ ಹಾಗೂ ನಿರ್ದೇಶಕ ನಿದಿರ್ಶ ಅವರನ್ನು 13 ಗಂಟೆಗಳ ಕಾಲ ತನಿಖೆಗೊಳಪಡಿಸಲಾಗಿತ್ತು. ದಿಲೀಪ್ ಬಂಧನದ ನಂತರ ಪೊಲೀಸರು ಈತನ ಪತ್ನಿ ಕಾವ್ಯ ಮಾಧವನ್ ಅವರ ವ್ಯವಹಾರಿಕ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದಾರೆ.
ನಟಿಯನ್ನು ಫೆಬ್ರವರಿಯಲ್ಲಿ ಅಲ್ಲದೆ ಕೆಲವು ವರ್ಷಗಳ ಹಿಂದೆ ಕೂಡ ಅಪಹರಣಕ್ಕೆ ಪ್ರಯತ್ನಿಸಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯಲ್ಲಿ ಇಂದು ಬೆಳಿಗ್ಗೆ ದೀಲಿಪ್ ಅವರನ್ನು ಬಂಧಿಸಲಾಗಿದೆ. ಪ್ರಮುಖ ನಟಿಯನ್ನು ಫೆಬ್ರವರಿ 19ರ ರಾತ್ರಿ ಕಾರಿನಲ್ಲಿ ತೆರಳುತ್ತಿದ್ದಾಗ ಅಪಹರಿಸಿ ಲೈಂಗಿಕ ಕಿರುಕುಳ ನೀಡಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪಲ್ಸರ್ ಸುನಿ ಎಂಬಾತನನ್ನು ಏಪ್ರಿಲ್'ನಲ್ಲಿಯೇ ಬಂಧಿಸಿದ್ದಾರೆ. ಪಲ್ಸರ್ ಸುನಿ ದಿಲೀಪ್ ಅವರಿಗೆ ನೆರವು ಕೋರಿ ಪತ್ರ ಬರೆದಿದ್ದನ್ನು ಪೊಲೀಸರು ಬಹಿರಂಗ ಪಡಿಸಿದ್ದರು. ಈ ಸಂಬಂಧ ದಿಲೀಪ್ ಕೂಡ ಪಲ್ಸರ್ ಸುನೀಲ್ ತಮಗೆ ಹಣಕ್ಕಾಗಿ ಬೇಡಿಕೆಯಿಡುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.