ಮಠದಲ್ಲೇ ತಾಳೆಗರಿಗಳ ಡಿಜಿಟಲೀಕರಣ!

Published : Nov 13, 2016, 10:56 AM ISTUpdated : Apr 11, 2018, 12:40 PM IST
ಮಠದಲ್ಲೇ ತಾಳೆಗರಿಗಳ ಡಿಜಿಟಲೀಕರಣ!

ಸಾರಾಂಶ

ಚಿತ್ರದುರ್ಗ ಮುರುಘಾ ಮಠದ ಪೀಠಾಧ್ಯಕ್ಷರುಗಳಾದ, ಶಾಂತವೀರ ಮುರುಘಾ ಸ್ವಾಮೀಜಿಯಿಂದ ಹಿಡಿದು ಈಗಿನ ಡಾ. ಶಿವಮೂರ್ತಿ ಮುರುಘಾ ಶರಣರ ಕಾಲದವರೆಗೂ ತಾಳೆಗರಿಗಳನ್ನು ಸಂಗ್ರಹಿಸಡಲಾಗಿದೆ. 12ನೇ ಶತಮಾನದಿಂದ 17ನೇ ಶತಮಾನದವರೆಗೂ ಸುಮಾರು 2 ಲಕ್ಷ ತಾಳೆಗರಿಗಳು ಇಲ್ಲಿವೆ. ಕೇರಳದಿಂದ ತರಿಸಿರುವ ಲೆಮೆನ್ ರೇಸ್ ದ್ರವ್ಯದಿಂದ ತಾಳೆ ಗರಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ನಂತರ ಅವುಗಳನ್ನು ಶುದ್ಧ ಬಟ್ಟೆಯಲ್ಲಿ ಕಟ್ಟಿಡಲಾಗುತ್ತೆ. ಬಳಿಕ ಅವುಗಳನ್ನು ಡಿಜಿಟಲೀಕರಣ ಮಾಡಲಾಗುತ್ತದೆ. ಈಗಾಗಲೇ ದಿನವೊಂದಕ್ಕೆ  20ರಿಂದ 30 ಜನ್ರು ಕೆಲಸ ಮಾಡುತ್ತಿದ್ದು 1 ಲಕ್ಷ ತಾಳೆಗರಿಗಳನ್ನು ಡಿಜಟಲೀಕರಣ ಮಾಡಿದ್ದಾರೆ. ಇನ್ನುಳಿದ ತಾಳೆಗರಿಗಳನ್ನು ಒಂದು ತಿಂಗಳೊಳಗೆ ಪೂರ್ತಿಗೊಳಿಸಲಿದ್ದಾರೆ.

ಚಿತ್ರದುರ್ಗ(ನ.13): ಶತಮಾನಗಳ ಇತಿಹಾಸವನ್ನು ತಿಳಿಯಲು ತಾಳೇಗರಿಗಳು ಬಹಳಷ್ಟು ಪ್ರಾಮುಖ್ಯತೆಯನ್ನು ಹೊಂದಿವೆ. 2 ಲಕ್ಷ ತಾಳೆಗರಿಗಳನ್ನು ಸಂರಕ್ಷಿಸುವ ಸಲುವಾಗಿ ಚಿತ್ರದುರ್ಗ ಮುರುಘಾ ಮಠದಲ್ಲಿ ಡಿಜಿಟಲೀಕರಣ ಕೆಲಸ ನಡೆಯುತ್ತಿದೆ.

ಚಿತ್ರದುರ್ಗ ಮುರುಘಾ ಮಠದ ಪೀಠಾಧ್ಯಕ್ಷರುಗಳಾದ, ಶಾಂತವೀರ ಮುರುಘಾ ಸ್ವಾಮೀಜಿಯಿಂದ ಹಿಡಿದು ಈಗಿನ ಡಾ. ಶಿವಮೂರ್ತಿ ಮುರುಘಾ ಶರಣರ ಕಾಲದವರೆಗೂ ತಾಳೆಗರಿಗಳನ್ನು ಸಂಗ್ರಹಿಸಡಲಾಗಿದೆ. 12ನೇ ಶತಮಾನದಿಂದ 17ನೇ ಶತಮಾನದವರೆಗೂ ಸುಮಾರು 2 ಲಕ್ಷ ತಾಳೆಗರಿಗಳು ಇಲ್ಲಿವೆ.

ಕೇರಳದಿಂದ ತರಿಸಿರುವ ಲೆಮೆನ್ ರೇಸ್ ದ್ರವ್ಯದಿಂದ ತಾಳೆ ಗರಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ನಂತರ ಅವುಗಳನ್ನು ಶುದ್ಧ ಬಟ್ಟೆಯಲ್ಲಿ ಕಟ್ಟಿಡಲಾಗುತ್ತೆ. ಬಳಿಕ ಅವುಗಳನ್ನು ಡಿಜಿಟಲೀಕರಣ ಮಾಡಲಾಗುತ್ತದೆ. ಈಗಾಗಲೇ ದಿನವೊಂದಕ್ಕೆ  20ರಿಂದ 30 ಜನ್ರು ಕೆಲಸ ಮಾಡುತ್ತಿದ್ದು 1 ಲಕ್ಷ ತಾಳೆಗರಿಗಳನ್ನು ಡಿಜಟಲೀಕರಣ ಮಾಡಿದ್ದಾರೆ. ಇನ್ನುಳಿದ ತಾಳೆಗರಿಗಳನ್ನು ಒಂದು ತಿಂಗಳೊಳಗೆ ಪೂರ್ತಿಗೊಳಿಸಲಿದ್ದಾರೆ.

ಒಟ್ಟಿನಲ್ಲಿ ತಾಳೆಗರಿಗಳನ್ನು ಸಂರಕ್ಷಿಸುವ ಕೆಲಸವನ್ನು ಮುರುಘಾ ಶರಣರು ಮಾಡ್ತಿದ್ದಾರೆ. ತಾಳೆಗರಿಗಳನ್ನು ಡಿಜಿಟಲೀಕರಣ ಕೆಲಸಕ್ಕೆ ಕೈ ಹಾಕಿರುವುದು ಶ್ಲಾಘನೀಯ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಲ್ಐಸಿ ಕಚೇರಿಯಲ್ಲಿ ಬೆಂಕಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಸಹೋದ್ಯೋಗಿಯಿಂದಲೇ ಎಲ್‌ಐಸಿ ಮಹಿಳಾ ಅಧಿಕಾರಿಯ ಕೊಲೆ
ಗೋಲ್ಡನ್‌ ಅವರ್‌ನಲ್ಲಿ ವಂಚಕರ ಪಾಲಾಗುತ್ತಿದ್ದ 2.16 ಕೋಟಿ ರು ವಾಪಸ್