
ನವದೆಹಲಿ(ನ.13): 500, 1000 ರೂ. ನೋಟುಗಳ ಮೇಲಿನ ನಿಷೇಧ ಘೋಷಣೆಯಾದಾಗಿನಿಂದ ಕಾಳಧನಿಕರು ನಿದ್ದೆ ಮಾಡುತ್ತಿಲ್ಲ. ಹಲವೆಡೆ ನೋಟುಗಳನ್ನ ಸುಡುವುದು, ಕತ್ತರಿಸಿ ಬಿಸಾಡುತ್ತಿರುವ ಬಗ್ಗೆ ಸುದ್ಧಿಯಾಗುತ್ತದೆ. ಆದರೆ, ಈ ರೀತಿ ಆಗುವುದರಿಂದ ದೇಶಕ್ಕೆ ಬಹಳಷ್ಟು ನಷ್ಟ. ಅದರ ಬದಲು ಇದನ್ನ ದೇಶದ ಅಭಿವೃದ್ಧಿ ಬಳಸಿಕೊಳ್ಳಿ ಎಂದು ಸಾಮಾನ್ಯ ವ್ಯಕ್ತಿಯೊಬ್ಬ ಮೋದಿಗೆ ನೀಡಿರುವ ಸಲಹೆ ವೈರಲ್ ಆಗಿದೆ.
ಪ್ರಧಾನಿಗೆ ಸಲಹೆ: @indiantweeter ಎಂಬ ಅಕೌಂಟ್`ನಲ್ಲಿ ಈ ಬಗ್ಗೆ ಮೋದಿಗೆ ಸಲಹೆ ನೀಡಲಾಗಿದ್ದು, 184ಕ್ಕೂಅ ಧಿಕಟೀಟ್ವೀಟ್ ಆಗಿದೆ. ಅಷ್ಟಕ್ಕೂ ಆತನ ಸಲಹೆ ಏನು ಗೊತ್ತಾ..? ಇಂಡಿಯನ್ ಆರ್ಮಿ ಹೆಸರಲ್ಲಿ ಬ್ಯಾಂಕ್ ಅಕೌಂಟ್ ಓಪನ್ ಮಾಡಬೇಕು. ಆ ಅಕೌಂಟಿಗೆ ಯಾರು ಬೇಕಾದರೂ ಎಷ್ಟೇ ಹಣವನ್ನ ಡೆಪಾಸಿಟ್ ಮಾಡಬಹುದು. ಅವರ ಮೇಲೆ ಯಾವುದೇ ತನಿಖೆ ನಡೆಸಬಾರದು. ಇದರಿಂದ, ದೇಶದ ಅಭಿವೃದ್ಧಿಗೆ ಹಣ ಸಿಗುವ ಜೊತೆಗೆ ಹಣ ಹಾಳಾಗುವುದನ್ನೂ ತಡೆಯಬಹುದು ಎಂದು ಸಲಹೆ ನೀಡಿದ್ಧಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.