
ಬೆಂಗಳೂರು (ಸೆ.28): ಸ್ಯಾಂಡಲ್'ವುಡ್ ಲವರ್ ಬಾಯ್ ಹೀರೋಗಳಾದ ದೂದ್ ಪೇಡಾ ದಿಗಂತ್ ಹಾಗೂ ಪ್ರಜ್ವಲ್ ದೇವರಾಜ್ ಬಗ್ಗೆ ವಿವಾದವೊಂದು ಸುತ್ತಿಕೊಂಡಿದೆ.
ಲವರ್ ಬಾಯ್ ಪಾತ್ರಗಳಲ್ಲಿ ಕನ್ನಡ ಸಿನಿ ಪ್ರೇಕ್ಷಕರನ್ನ ರಂಜಿಸುತ್ತಿರೋ, ದಿಗಂತ್ ಹಾಗೂ ಪ್ರಜ್ವಲ್ ದೇವರಾಜ್ ಸೌತ್ ಎಂಡ್ ಸರ್ಕಲ್'ನಲ್ಲಿ ಅಡ್ಡಾ ದಿಡ್ಡಿ ಕಾರು ಓಡಿಸಿರೋದಲ್ಲದೆ ಕಾರಿನಲ್ಲಿ ಕೋಟಿ ಬೆಲೆ ಬಾಳೋ ಗಾಂಜಾ ಹೊಂದಿದ್ದರು ಜೊತೆಗೆ ಗಾಂಜಾ ಸೇವಿಸಿದ್ದರೆಂಬ ಆರೋಪ ಹಬ್ಬಿದೆ. ಆದರೆ ಅಸಲಿ ವಿಷಯವೇ ಬೇರೆ. ಅಡ್ಡಾ ದಿಡ್ಡಿ ಓಡಿಸಿದ ಕಾರು ಬೆಂಗಳೂರಿನ ಖ್ಯಾತ ಉದ್ಯಮಿ ಮೊಮ್ಮಗನದ್ದು. ಅದು ಬೆಂಜ್ ಕಾರಿನಲ್ಲಿ, ಕಳೆದ ರಾತ್ರಿ ಸೌತ್ ಎಂಡ್ ಸರ್ಕಲ್'ನಲ್ಲಿ ಒಮ್ನಿ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ಪರಿಣಾಮ ಬೆಂಜ್ ಕಾರಿನಲ್ಲಿ ಖ್ಯಾತ ಉದ್ಯಮಿ ಮೊಮ್ಮಗ ವಿಷ್ಣು ಹಾಗು ಟಿಟಿಡಿ ಮಾಜಿ ಅಧ್ಯಕ್ಷ, ಆದಿಕೇಶವುಲು ಮೊಮ್ಮಗನನ್ನ ಸ್ಥಳಿಯರು ತಳಿಸಿದ್ದಾರೆ ಎನ್ನಲಾಗಿದೆ. ಆ ಟೈಮಲ್ಲಿ ದಿಗಂತ್ ಹಾಗೂ ಪ್ರಜ್ವಲ್ ದೇವರಾಜ್ ಜೊತೆಗೆ ಇದ್ರು ಅಂತಾ ಹೇಳಲಾಗುತ್ತಿದೆ. ಇಷ್ಟೇ ಆಗಿದ್ದರೆ ಸುಮ್ಮನಾಗಬಹುದಿತ್ತು. ಈ ಉದ್ಯಮಿ ಮಕ್ಕಳು ಕೋಟಿ ಬೆಲೆ ಬಾಳುವ ಗಾಂಜಾ ಸಮೇತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಆದರೆ ಬೆಂಜ್ ಕಾರಿನಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ದಿಗಂತ್ ಇದ್ರು ಅನ್ನೋದನ್ನ ಪೊಲೀಸರು ಎಲ್ಲೂ ಕೂಡ ಹೇಳಿಲ್ಲ. ಆದರೂ ಆಕ್ಸಿಡೆಂಟ್ ಕೇಸ್ ನಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ದಿಗಂತ್ ಹೆಸರು ಕೇಳಿ ಬಂದಿದ್ದು ಕನ್ನಡ ಚಿತ್ರರಂಗಕ್ಕೆ ಶಾಕಿಂಗ್ ನ್ಯೂಸ್ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.