
ಬಾಗಲಕೋಟೆ [ಜೂ.29] : ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಭಿನ್ನತೆ ಇರುವುದು ಪದೇ ಪದೇ ಸಾಬೀತಾಗುತ್ತಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಈಶ್ವರಪ್ಪ, ರಾಜ್ಯದಲ್ಲಿ ಇರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಬಗ್ಗೆ ಪ್ರಮುಖರಲ್ಲೇ ಸ್ಪಷ್ಟವಾದ ಭಿನ್ನತೆ ಗೋಚರಿಸುತ್ತಿದೆ. ಅಂಬೇಡ್ಕರ್ ಅವರನ್ನೇ ಕಾಂಗ್ರೆಸ್ ನವರು 2 ಬಾರಿ ಸೋಲಿಸಿದ್ದರು. ಖರ್ಗೆ ಮುನಿಯಪ್ಪರನ್ನು ಬಿಡುತ್ತಾರಾ ಎಂದು ದೇವೇಗೌಡರು ಹೇಳುತ್ತಿದ್ದಾರೆ. ಇನ್ನು ಸಿದ್ದರಾಮಯ್ಯ ಅವರು, ಮೈಸೂರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವಿಜಯಶಂಕರ್ ಗೆಲ್ಲಲು ಜೆಡಿಎಸ್ ನವರು ವೋಟ್ ಕೊಡಲಿಲ್ಲ ಎನ್ನುತಿದ್ದಾರೆ. ಇದರಿಂದ ಎರಡು ಪಕ್ಷಗಳ ನಾಯಕರ ಅಸಮಾಧಾನ ಎದ್ದು ಕಾಣುತ್ತಿದೆ. ಕಾಂಗ್ರೆಸ್ ಮೈತ್ರಿ ಜೆಡಿಎಸ್ ಒಪ್ಪಿಲ್ಲ, ಜೆಡಿಎಸ್ ಮೈತ್ರಿ ಕಾಂಗ್ರೆಸ್ ಒಪ್ಪಿಲ್ಲ ಎಂದು ವ್ಯಂಗ್ಯ ಮಾಡಿದರು.
ಇನ್ನು ರಾಜ್ಯದಲ್ಲಿ ಜನರ ತೀರ್ಪಿನ ವಿರುದ್ಧವಾಗಿ ಮೈತ್ರಿ ಮಾಡಿಕೊಂಡರು. ಕೋಮುವಾದಿ ಬಿಜೆಪಿಯನ್ನು ಪಕ್ಕಕ್ಕೆ ಸರಿಸುತ್ತೇವೆ ಎಂದು ಒಂದಾದರು. ಆದರೆ ಇದನ್ನು ಜನರೇ ಒಪ್ಪಲಿಲ್ಲ. ಸಿದ್ದರಾಮಯ್ಯ ಮೋದಿಗೆ ಏಕವಚನದಲ್ಲಿ ಬೈದರು. ಇದನ್ನೇ ಮೆಚ್ಚಿ ಜನ ಬಿಜೆಪಿಗೆ ವೋಟ್ ಮಾಡಿದರು. ಅವರ ಮಾತುಗಳು ಅವರಿಗೆ ಹಿನ್ನಡೆಯಾದವು ಎಂದು ಈಶ್ವರಪ್ಪ ಹೇಳಿದರು.
ದೇಶದ ಜನ ನರೇಂದ್ರ ಮೋದಿಗೆ ವೋಟ್ ಕೊಟ್ಟಮೇಲೆ ಸಿದ್ದರಾಮಯ್ಯ ಕೆಲ್ಸ ಮಾಡದವರಿಗೆ ವೋಟ್ ಕೊಟ್ಟರು ಎನ್ನುತ್ತಾರೆ. ಕರ್ನಾಟಕದಲ್ಲಿ ಯಾವುದೇ ಸಂದರ್ಭದಲ್ಲಿ ಚುನಾವಣೆ ಬಂದರೆ ಸಿದ್ದರಾಮಯ್ಯರ ಉವಾಚ ಮುಂದಿಟ್ಟುಕೊಂಡೇ ಹೋಗುತ್ತೇವೆ. ನಿದ್ದೆ ಮಾಡುವವರನ್ನು ಬಿಟ್ಟು ಕೆಲಸ ಮಾಡುವವರಿಗೆ ವೋಟ್ ಕೊಡಿ ಎನ್ನುತ್ತೇವೆ ಎಂದು ಬಿಜೆಪಿ ನಾಯಕ ಈಶ್ವರಪ್ಪ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.