ವೈರಲ್ ಚೆಕ್: 200 ಟನ್‌ ಚಿನ್ನವನ್ನು ವಿದೇಶಕ್ಕೆ ಸಾಗಿಸಿತ್ತಾ ಮೋದಿ ಸರ್ಕಾರ?

By Web DeskFirst Published May 6, 2019, 9:42 AM IST
Highlights

ಮೋದಿ ಸರ್ಕಾರ ಭಾರತೀಯ ರಿಸವ್‌ರ್‍ ಬ್ಯಾಂಕನಲ್ಲಿ ಇಟ್ಟಿದ್ದ 200 ಟನ್‌ ಚಿನ್ನವನ್ನು ಗುಪ್ತವಾಗಿ ವಿದೇಶಕ್ಕೆ ಸಾಗಿಸಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ಧಿ? ಏನಿದರ ಸತ್ಯಾಸತ್ಯತೆ? ಇಲ್ಲಿದೆ ನೋಡಿ. 

ಮೋದಿ ಸರ್ಕಾರ ಭಾರತೀಯ ರಿಸರ್ವ್ ಬ್ಯಾಂಕನಲ್ಲಿ ಇಟ್ಟಿದ್ದ 200 ಟನ್‌ ಚಿನ್ನವನ್ನು ಗುಪ್ತವಾಗಿ ವಿದೇಶಕ್ಕೆ ಸಾಗಿಸಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವೆಬ್‌ಸೈಟ್‌ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ವರದಿಯ ಲಿಂಕ್‌ ಅನ್ನು ಕಾಂಗ್ರೆಸ್‌ ತನ್ನ ಅಧಿಕೃತ ಟ್ವೀಟರ್‌ ಖಾತೆಯಲ್ಲಿ ಶೇರ್‌ ಮಾಡಿ, ‘2014ರಲ್ಲಿ ಮೋದಿ ಸರ್ಕಾರ 200 ಟನ್‌ ಆರ್‌ಬಿಐ ಚಿನ್ನವನ್ನು ಸ್ವಿಡ್ಜರ್‌ಲ್ಯಾಂಡ್‌ಗೆ ರವಾನಿಸಿತ್ತೇ? ಚಿನ್ನ ವಿನಿಮಯಕ್ಕೆ ಮೋದಿ ಸರ್ಕಾರ ಆ ದೇಶದಿಂದ ಏನು ಲಾಭ ಪಡೆದಿದೆ? ಸಾರ್ವಜನಿಕವಾಗಿ ಈ ಮಾಹಿತಿ ಲಭ್ಯವಿಲ್ಲ ಏಕೆ? ಎಂದು ಪ್ರಶ್ನೆ ಮಾಡಿದೆ.

ಈ ಸುದ್ದಿ ವಾಟ್ಸ್‌ಆ್ಯಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲಿ ವೈರಲ್‌ ಆಗುತ್ತಿದೆ. ದೈನಿಕ್‌ ದೋಫಾರ್‌ ಎಂಬ ಹಿಂದಿ ದಿನಪತ್ರಿಕೆಯೂ ಇದನ್ನು ಪ್ರಕಟಿಸಿದ್ದು, ‘ಮೋದಿ ಸರ್ಕಾರ 4 ವರ್ಷದ ಹಿಂದೆ ಗುಪ್ತವಾಗಿ 268 ಟನ್‌ ಗೋಲ್ಡ್‌ಅನ್ನು ವಿದೇಶಕ್ಕೆ ರವಾನಿಸಿದೆ’ ಎಂದು ಹೇಳಿದೆ. ಅಲ್ಲದೆ ತನಿಕಾ ಪತ್ರಿಕೋದ್ಯಮದ ಭಾಗವಾಗಿ ನಿಶಾಂತ್‌ ಚತುರ್ವೇದಿ ಅವರು ಆರ್‌ಟಿಐ ಅಡಿಯನ್ನು ಈ ಮಾಹಿತಿ ಪಡೆದಿದ್ದಾರೆ ಎಂದು ಹೇಳಲಾಗಿದೆ.

ಈ ಸುದ್ದಿಯ ಸತ್ಯಾಸತ್ಯತ ಪರಿಶೀಲಿಸಿಲು ಆಲ್ಟ್‌ನ್ಯೂಸ್‌ ಸುದ್ದಿಸಂಸ್ಥೆ ಆರ್‌ಬಿಐನ ವಾರ್ಷಿಕ ವರದಿಗಳನ್ನು ಪರಿಶೀಲಿಸಿದಾಗ, 2014-18ರ ವರೆಗೆ ಆರ್‌ಬಿಐನಲ್ಲಿ ಇಟ್ಟಿರುವ ಯಾವುದೇ ಚಿನ್ನವೂ ಕಳುವಾಗಿಲ್ಲ. ವಾಸ್ತವವಾಗಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಹಾಗಾಗಿ ಬಾರತೀಯ ರಿಸವ್‌ರ್‍ ಬ್ಯಾಂಕಿನಿಂದ ನರೇಂದ್ರ ಮೋದಿ ಸರ್ಕಾರ 200 ಟನ್‌ ಚಿನನ್ವನನು ಗುಪ್ತವಾಗಿ ಸಾಗಿಸಿದೆ ಎಂಬ ಸುದ್ದಿ ಸುಳ್ಳು.

- ವೈರಲ್ ಚೆಕ್ 


 

click me!