
ಕೇರಳ ನಟಿಯ ಅಪಹರಣಕ್ಕೆ ಆರೋಪಿ ಪಲ್ಸರ್ ಸುನಿಗೆ ಮಹಿಳೆಯೊಬ್ಬಳು ಸುಪಾರಿ ನೀಡಿದ್ದಳೆಂಬ ಅಘಾತಕಾರಿ ಅಂಶ ಹೊರಬಂದಿದೆ.
ಕೆರಳದ ಸ್ಥಳೀಯ ಸುದ್ದಿ ಸಂಸ್ಥೆ ಮೀಡಿಯಾ ಒನ್’ಗೆ ನೀಡಿರುವ ಸಂದರ್ಶನದಲ್ಲಿ ಹಿರಿಯ ಕಲಾವಿದೆ ಭಾಗ್ಯಲಕ್ಷ್ಮಿ ಈ ಮಾತನ್ನು ಹೊರಗೆಡಹಿದ್ದಾರೆ. ಈ ವಿಷಯವನ್ನು ಸ್ವತಃ ಆರೋಪಿ ಸುನಿ ಸಂತ್ರಸ್ತೆಗೆ ಹೇಳಿದ್ದಾನೆಂದು ಅವರು ಹೇಳಿದ್ದಾರೆ.
ಮಹಿಳೆಯೊಬ್ಬಳು ‘ಕೊಟೇಶನ್’ ಕೊಟ್ಟಿದ್ದಾಳೆಂದು ಸುನಿ ಹೇಳಿದಾಗ ತಾನು ಅದಕ್ಕಿಂತ ಹೆಚ್ಚು ಮೊತ್ತವನ್ನು ಕೊಡುವುದಾಗಿಯೂ, ತನ್ನನ್ನು ಬಿಟ್ಟುಬಿಡಲು ಬೇಡಿಕೊಂಡರೂ ಆತ ಮಾತನ್ನು ಕೇಳಲಿಲ್ಲವೆಂದೂ, ಸಂತ್ರಸ್ತೆಯು ತನ್ನ ನೋವನ್ನು ತೋಡಿಕೊಂಡಿದ್ದಾರೆಂದು ಭಾಗ್ಯಲಕ್ಷ್ಮಿ ಹೇಳಿದ್ದಾರೆ.
ಪೋಲಿಸರಿಗೆ ನೀಡಿರುವ ಹೇಳಿಕೆಯಲ್ಲಿ ತಾನು ಯಾವುದೇ ನಟನ ಹೆಸರು ಉಲ್ಲೇಖಿಸಿಲ್ಲವೆಂದೂ ಸಂತ್ರಸ್ತೆ ಹೇಳಿದ್ದಾರೆಂದು ಭಾಗ್ಯಲಕ್ಷ್ಮಿ ತಿಳಿಸಿದ್ದಾರೆ. ತನ್ನ ಯಶಸ್ಸನ್ನು ಸಹಿಸದಿರಬಹುದು, ಆದರೆ ಹೆಸರಿಸಲಾಗುತ್ತಿರುವ ನಟ ಷ್ಟು ಕೀಳು ಮಟ್ಟಕ್ಕೀಳಿಯಲಾರರು ಎಂಬ ಅಭಿಪ್ರಾಯವನ್ನು ಸಂತ್ರಸ್ತ ನಟಿ ವ್ಯಕ್ತಪಡಿಸಿದ್ದಾರೆಂದೂ ಆಕೆ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.