ಕ್ಷಮೆ ಕೇಳದಿದ್ದರೆ 50 ಕೋಟಿ ರೂ. ಮಾನನಷ್ಟ ಮೊಕದ್ದಮೆ: ರೂಪಾಗೆ ನೋಟಿಸ್

By Suvarna Web DeskFirst Published Jul 26, 2017, 6:30 PM IST
Highlights

ಸತ್ಯನಾರಾಯಣ್ ಅವರು ಶಶಿಕಲಾ ಹಾಗೂ ಮತ್ತು ಹಲವು ಕೈದಿಗಳಿಗೆ ಲಂಚ ಪಡೆದು ರಾಜಾಥಿತ್ಯ ನೀಡಿದ್ದರು ಎಂದು ಡಿ.ರೂಪ ಆರೋಪಿಸುವುದರ ಜೊತೆಗೆ ಮೇಲಧಿಕಾರಿಗಳಿಗೂ ಪತ್ರ ಬರೆದಿದ್ದರು.

ಬೆಂಗಳೂರು(ಜು.26): ತಮ್ಮ ವಿರುದ್ಧ ಲಂಚದ ಆರೋಪ ಮಾಡಿರುವ ಡಿಐಜಿ ಡಿ.ರೂಪ ಅವರಿಗೆ ಕಾರಾಗೃಹ ಡಿಜಿಪಿ ಸತ್ಯನಾರಾಯಣ್ ರಾವ್ ಅವರು ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಮೂರು ದಿನಗಳಲ್ಲಿ ಬೇಷಾರತ್ ಕ್ಷಮೆ ಕೇಳದಿದ್ದರೆ 50 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ನೋಟಿಸ್'ನಲ್ಲಿ ಎಚ್ಚರಿಕೆ ನೀಡಲಾಗಿದೆ. ಹಿರಿಯ ವಕೀಲ ರಮೇಶ್ ಪುತ್ತಿಗೆ ಅವರ ಮೂಲಕ ನೋಟಿಸ್ ಕಳುಹಿಸಿದ್ದಾರೆ.

ಸತ್ಯನಾರಾಯಣ್ ಅವರು ಶಶಿಕಲಾ ಹಾಗೂ ಮತ್ತು ಹಲವು ಕೈದಿಗಳಿಗೆ ಲಂಚ ಪಡೆದು ರಾಜಾಥಿತ್ಯ ನೀಡಿದ್ದರು ಎಂದು ಡಿ.ರೂಪ ಆರೋಪಿಸುವುದರ ಜೊತೆಗೆ ಮೇಲಧಿಕಾರಿಗಳಿಗೂ ಪತ್ರ ಬರೆದಿದ್ದರು. ಇದು ದೇಶಾದ್ಯಂತ ಭಾರಿ ಸುದ್ದಿಯಾಗಿತ್ತು. ಆರೋಪಕ್ಕೆ ಪೂರಕವೆಂಬಂತೆ ದೃಶ್ಯಗಳು ಹಾಗೂ ಭಾವಚಿತ್ರಗಳು ಬಿಡುಗಡೆಯಾಗಿದ್ದವು. ತದ ನಂತರ ರೂಪ ಅವರನ್ನು ಟ್ರಾಫಿಕ್ ಇಲಾಖೆಯ ಆಯುಕ್ತರನ್ನಾಗಿ ಹಾಗೂ ಸತ್ಯನಾರಾಯಣ್ ಅವರನ್ನು ರಜೆಯ ಮೇಲೆ ತೆರಳುವಂತೆ ಸರ್ಕಾರ ಆದೇಶಿಸಿತ್ತು.   

click me!