
ಬೆಂಗಳೂರು[ಜು.3] : ನೈಋುತ್ಯ ರೈಲ್ವೆಯು ನಗರದ ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಜು.3ರಿಂದ 7ರ ವರೆಗೆ ಈ ಮಾರ್ಗದಲ್ಲಿ ಸಂಚರಿಸುವ ಕೆಲ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಬೆಂಗಳೂರು ಕಂಟೋನ್‌ಮೆಂಟ್-ವಿಜಯವಾಡ- ಬೆಂಗಳೂರು ಕಂಟೋನ್‌ಮೆಂಟ್ ಪ್ಯಾಸೆಂಜರ್ ರೈಲು (ಸಂಖ್ಯೆ 56503/56504) ಸಂಚಾರವನ್ನು ಜು.3ರಿಂದ ಜು.7ರ ವರೆಗೆ ರದ್ದುಗೊಳಿಸಲಾಗಿದೆ. ಅಂತೆಯೆ ವೈಟ್‌ಫೀಲ್ಡ್-ಬಾಣಸವಾಡಿ-ವೈಟ್‌ಫೀಲ್ಡ್ ರೈಲು (ಸಂಖ್ಯೆ 06577/06578), ಬಾಣಸವಾಡಿ- ಹೊಸೂರು-ಬಾಣಸವಾಡಿ ಡೆಮು ರೈಲು (ಸಂಖ್ಯೆ06571/07572, 06573/06574) ಸಂಚಾರವನ್ನು ಜು.3ರಿಂದ ಜು.6ರ ವರೆಗೆ ರದ್ದುಗೊಳಿಸಲಾಗಿದೆ.
ಸಂಬಲ್‌ಪುರ್-ಬಾಣಸವಾಡಿ ವಿಶೇಷ ರೈಲು( ಸಂಖ್ಯೆ 08301) ಜು.3, 10 ಹಾಗೂ 17ರಂದು ಕೃಷ್ಣರಾಜಪುರಂ ವರೆಗೆ ಮಾತ್ರ ಸಂಚರಿಸಲಿದೆ. ಅಲ್ಲದೆ, ಬಾಣಸವಾಡಿ-ಸಂಬಲ್‌ಪುರ ವಿಶೇಷ ರೈಲು ಜು.4, 11 ಹಾಗೂ 18ರಂದು ಬಾಣಸವಾಡಿ ಬದಲು ಕೃಷ್ಣರಾಜಪುರಂ ರೈಲು ನಿಲ್ದಾಣ ದಿಂದ ಹೊರಡಲಿದೆ ಎಂದು ನೈಋುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.