ಯಾರನ್ನು ಓಲೈಸಲ್ಲ, ಸರ್ವರ ವಿಕಾಸಕ್ಕೆ ಬದ್ಧ: ಗೋರಕ್’ಪುರದಲ್ಲಿ ಯೋಗಿ ಆದಿತ್ಯನಾಥ್

By Suvarna Web DeskFirst Published Mar 25, 2017, 2:56 PM IST
Highlights

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಗೋರಕ್ ಪುರಕ್ಕೆ ಭೇಟಿ ನೀಡಿರುವ ಯೋಗಿ, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯೇ ಗುರಿಯಾಗಿದ್ದು, ಇದರಲ್ಲಿ ಜಾತಿ, ಧರ್ಮ ಅಥವಾ ಲಿಂಗಧಾರಿತ ತಾರತಮ್ಯಕ್ಕೆ ಯಾವುದೇ ಅವಕಾಶವಿರದು ಎಂದು ಹೇಳಿದ್ದಾರೆ.

ಗೋರಕ್’ಪುರ, ಉತ್ತರ ಪ್ರದೇಶ (ಮಾ.25):ಉತ್ತರ ಪ್ರದೇಶ ಮುಖ್ಯಮಂತ್ರಿyಯಾಗಿ ಅಧಿಕಾರ ಸ್ವೀಕರಿಸದ ಬಳಿಕ ತಮ್ಮ ಸ್ವಕ್ಷೇತ್ರ ಗೋರಕ್ ಪುರಕ್ಕೆ ಆಗಮಿಸಿರುವ ಯೋಗಿ ಆದಿತ್ಯನಾಥ್, ರಾಜ್ಯದ ಅಭಿವೃದ್ಧಿಯೇ ತನ್ನ ಗುರಿ, ಅದರಲ್ಲಿ ಯಾವುದೇ ತಾರತಮ್ಯವಿಲ್ಲವೆಂದು ಹೇಳಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಗೋರಕ್ ಪುರಕ್ಕೆ ಭೇಟಿ ನೀಡಿರುವ ಯೋಗಿ, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯೇ ಗುರಿಯಾಗಿದ್ದು, ಇದರಲ್ಲಿ ಜಾತಿ, ಧರ್ಮ ಅಥವಾ ಲಿಂಗಧಾರಿತ ತಾರತಮ್ಯಕ್ಕೆ ಯಾವುದೇ ಅವಕಾಶವಿರದು ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಯವರ ಧ್ಯೇಯದಂತೆ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ನಮ್ಮ ಆದ್ಯತೆಯಾಗಿದೆ, ಎಲ್ಲರೂ ಅಭಿವೃದ್ಧಿ ಹೊಂದುವರು, ಯಾರನ್ನು ಓಲೈಸಲಾಗದು ಎಂದು ಯೋಗಿ ಹೇಳಿದ್ದಾರೆ.

ನಾವು ನೀಡಿರುವ ಲ್ಲಾ ಭರವಸೆಗಳನ್ನು ಈಡೇರಿಸುವೆವು. ಉತ್ತರ ಪ್ರದೇಶವು ಅಭಿವೃದ್ಧಿ ಹೊಂದಿದ ರಾಜ್ಯವಾಗಲಿದೆ. ಅದಕ್ಕೆ ನಿಮ್ಮೆಲ್ಲರ ಸಹಕಾರದ ಅಗತ್ಯವಿದೆಯೆಂದು ಯೋಗಿ ಹೇಳಿದ್ದಾರೆ.

click me!