ಜಿಎಸ್ಟಿ ಅಧಿವೇಶನದಲ್ಲಿ ದೇವೇಗೌಡರಿಗೆ ಗೌರವ: ಪ್ರಧಾನಿ ಪಕ್ಕದಲ್ಲೇ ಆಸನ ವ್ಯವಸ್ಥೆ!

Published : Jul 01, 2017, 08:01 AM ISTUpdated : Apr 11, 2018, 12:51 PM IST
ಜಿಎಸ್ಟಿ ಅಧಿವೇಶನದಲ್ಲಿ ದೇವೇಗೌಡರಿಗೆ ಗೌರವ: ಪ್ರಧಾನಿ ಪಕ್ಕದಲ್ಲೇ ಆಸನ ವ್ಯವಸ್ಥೆ!

ಸಾರಾಂಶ

ದೇಶದ ತೆರಿಗೆ ವ್ಯವಸ್ಥೆ ಇತಿಹಾಸದಲ್ಲಿಯೇ ಅತಿದೊಡ್ಡ ಸುಧಾರಣಾ ತರಲು ಕೇಂದ್ರ ಸರ್ಕಾರ ಜಿಎಎಸ್​​'ಟಿ ಜಾರಿಗೆ ತಂದಿದೆ. ಮಧ್ಯರಾತ್ರಿ ನಡೆದ ಸಂಸತ್ ವಿಶೇಷ ಅಧಿವೇಶನ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಜಿಎಸ್'ಟಿ ಕುರಿತ ನಡೆದ ವಿಶೇಷ ಅಧಿವೇಶನದಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ವೇದಿಕೆ ಮೇಲೆ ಬರುವಂತೆ ಪ್ರಧಾನಿ ಮೋದಿ ಆಹ್ವಾನಿಸಿ ವಿಶೇಷ ಗೌರವ ನೀಡಿದರು. ಆ ಕುರಿತ ಒಂದು ರಿಪೋರ್ಟ್​ ಇಲ್ಲಿದೆ ನೋಡಿ.

ನವದೆಹಲಿ(ಜು.01): ದೇಶದ ತೆರಿಗೆ ವ್ಯವಸ್ಥೆ ಇತಿಹಾಸದಲ್ಲಿಯೇ ಅತಿದೊಡ್ಡ ಸುಧಾರಣಾ ತರಲು ಕೇಂದ್ರ ಸರ್ಕಾರ ಜಿಎಎಸ್​​'ಟಿ ಜಾರಿಗೆ ತಂದಿದೆ. ಮಧ್ಯರಾತ್ರಿ ನಡೆದ ಸಂಸತ್ ವಿಶೇಷ ಅಧಿವೇಶನ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಜಿಎಸ್'ಟಿ ಕುರಿತ ನಡೆದ ವಿಶೇಷ ಅಧಿವೇಶನದಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ವೇದಿಕೆ ಮೇಲೆ ಬರುವಂತೆ ಪ್ರಧಾನಿ ಮೋದಿ ಆಹ್ವಾನಿಸಿ ವಿಶೇಷ ಗೌರವ ನೀಡಿದರು. ಆ ಕುರಿತ ಒಂದು ರಿಪೋರ್ಟ್​ ಇಲ್ಲಿದೆ ನೋಡಿ.

ನಿರೀಕ್ಷೆಯಂತೆ ಕಾಂಗ್ರೆಸ್​ ಹಾಗೂ ಎಡಪಕ್ಷಗಳು ವಿಶೇಷ ಅಧಿವೇಶನವನ್ನು  ಬಹಿಷ್ಕರಿಸಿದ್ದರು. ಹೀಗಾಗಿ  ವಿಪಕ್ಷ ನಾಯಕರ ಗೈರು ಹಾಜರಿ  ವಿಶೇಷ ಅಧಿವೇಶನದಲ್ಲಿ  ಎದ್ದು ಕಾಣುತ್ತಿತ್ತು.

ಆದರೆ, ಜೆಡಿಎಸ್​ ವರಿಷ್ಠ ಹಾಗೂ  ಮಾಜಿ  ಪ್ರಧಾನಿ ದೇವೇಗೌಡರು ಮಧ್ಯರಾತ್ರಿ ನಡೆದ ಐತಿಹಾಸಿಕ ಅಧಿವೇಶದಲ್ಲಿ ಭಾಗವಹಿಸಿ ಗಮನ ಸೆಳೆದರು . ಸಂಸತ್​ ಭವನದ ಸೆಂಟ್ರಲ್​ ಹಾಲ್​ನಲ್ಲಿ  ಮಾಜಿ ಪ್ರಧಾನಿ ದೇವೇಗೌಡರನ್ನು  ಖುದ್ದು ಪ್ರಧಾನಿ ನರೇಂದ್ರ ಮೋದಿ ಆಹ್ವಾನಿಸಿ ಡಾ.ಮನಮೋಹನ್ ಸಿಂಗ್ ಅವರಿಗೆ ಮೀಸಲಾಗಿದ್ದ ಆಸನದಲ್ಲಿ  ದೇವೇಗೌಡರಿಗೆ  ವ್ಯವಸ್ಥೆ ಮಾಡಿದರು.

ಜಿಎಸ್ ಟಿ ಜಾರಿಗಾಗಿ ಮಧ್ಯರಾತ್ರಿ ನಡೆದ ವಿಶೇಷ ಅಧಿವೇಶನಕ್ಕೆ ಪ್ರತಿಪಕ್ಷಗಳು ಬಹಿಷ್ಕಾರ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್​ ಅಧಿವೇಶನಕ್ಕೆ ಗೈರು ಆಗಿದ್ದರು. ಹಾಗಾಗಿ ಆ ಆಸನ ಖಾಲಿ ಇರಬಾರದು ಎಂದು ವಿಶೇಷ ಆಹ್ವಾನಿತರಾಗಿ ಆಗಮಿಸಿದ ಮಾಜಿ ಪ್ರಧಾನಿ ದೇವೇಗೌಡರಿಗೆ ಖುದ್ದು ಪ್ರಧಾನಿ ಮೋದಿ ಆಹ್ವಾನಿಸಿ ಆಸನದಲ್ಲಿ ಕೂರಿಸಿದರು.

ಮಾಜಿ ಪ್ರಧಾನಿ ದೇವೇಗೌಡರು ಇಳಿ ವಯಸ್ಸಿನಲ್ಲೂ ಮಧ್ಯರಾತ್ರಿ ನಡೆದ ವಿಶೇಷ ಅಧಿವೇಶನದಲ್ಲಿ ಭಾಗವಹಿಸಿದ್ದು, ಇತರೆ ರಾಜಕಾರಣಿಗಳಿಗೆ ದೇವೇಗೌಡರು ಮಾದರಿಯಾಗಿದ್ದರು. ಒಟ್ಟಿನಲ್ಲಿ ಜಿಎಸ್​ಟಿ ಜಾರಿ ಮಾಡುವುದರಿಂದ ಸಂಸತ್'​ನ ಸೆಂಟ್ರಲ್​​ ಹಾಲ್​ ಮಧ್ಯರಾತ್ರಿ ನಡೆದ ಮತ್ತೊಂದು ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಯ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಪ್ಪಳದಲ್ಲಿ ಭೀಕರ ಅಪಘಾತ, ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
ವನ್ಯಜೀವಿ-ಮಾನವ ಸಂಘರ್ಷ ಶಾಶ್ವತ ಪರಿಹಾರಕ್ಕೆ ಕ್ರಮ: ಸಚಿವ ಈಶ್ವರ್‌ ಖಂಡ್ರೆ