ಅನಂತ್ ಕುಮಾರ್ ಹೆಗಡೆಗೆ ದೇವನೂರು ಪತ್ರ

By suvarna Web DeskFirst Published Dec 27, 2017, 10:33 AM IST
Highlights

‘ದ್ವೇಷವೇ ನಿಮ್ಮ ತಂದೆ; ಅಸಹನೆಯೇ ನಿಮ್ಮ ತಾಯಿ; ಭ್ರಮೆಯೇ ನಿಮ್ಮ ಮೂಲ ಪುರುಷ; ಮಿಥ್ಯಾ ಎಂಬುದೇ ತಮ್ಮ ಜ್ಞಾನ ಸಂಪತ್ತು’ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಮೈಸೂರು (ಡಿ.27): ‘ದ್ವೇಷವೇ ನಿಮ್ಮ ತಂದೆ; ಅಸಹನೆಯೇ ನಿಮ್ಮ ತಾಯಿ; ಭ್ರಮೆಯೇ ನಿಮ್ಮ ಮೂಲ ಪುರುಷ; ಮಿಥ್ಯಾ ಎಂಬುದೇ ತಮ್ಮ ಜ್ಞಾನ ಸಂಪತ್ತು’ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಹೆಗಡೆ ಅವರ ‘ಸಂವಿಧಾನ ತಿದ್ದುಪಡಿ’ ಹಾಗೂ ‘ಜಾತ್ಯತೀತವಾದ’ದ ಕುರಿತ ಹೇಳಿಕೆ ಖಂಡಿಸಿ ಸಚಿವರಿಗೆ ಬಹಿರಂಗ ಪತ್ರ ಬರೆದಿರುವ ದೇವನೂರ, ತಮ್ಮಂಥವರ ಕೈಗೆ ಸಂವಿಧಾನ ರಚನಾ ಕಾರ್ಯ ಸಿಕ್ಕಿಬಿಟ್ಟಿದ್ದರೆ ಭ್ರಮಾಧೀನರಾದ ತಮ್ಮ ಪೂರ್ವಿಕರು ನರಕ ಸೃಷ್ಟಿಸಿ ಅದನ್ನೇ ಸ್ವರ್ಗ ಅಂದು ಬಿಡುತ್ತಿದ್ದ ರೇನೋ. ಸಂವಿಧಾನ ರಚನಾ ಕಾರ್ಯ ಡಾ. ಅಂಬೇಡ್ಕರ್ ಕೈಗೆ ಸಿಕ್ಕಿ ಭಾರತಮಾತೆ ಬಚಾವಾದಳು.

ಇತ್ತೀಚೆಗೆ ಹೆಗಡೆ ಸಿಎಂ ಆಗ್ತಾರೆ ಎನ್ನುವ ಸುದ್ದಿ ಇದೆ. ಹೀಗಾದರೆ ಕರ್ನಾಟಕವನ್ನು ಸ್ಮಶಾನ ಮಾಡಿ ಬಿಡುವ ಭೀತಿ ಉಂಟಾ ಗುತ್ತದೆ. ಬಿಎಸ್‌ವೈ ಅವರೇ  ಎಷ್ಟೋ ವಾಸಿ ಅನ್ನಿಸಿಬಿಡುತ್ತದೆ.

ಕೊನೆಯ ದಾಗಿ ತಮಗೊಂದು ಕಿವಿ ಮಾತು: ಕುವೆಂಪು ಅವರ ವೈಚಾರಿಕತೆಗೆ ತತ್ತರಿಸಿದ ಧರ್ಮಾಂಧರು ತುಂಬಾ ನೀಚವಾಗಿ ಪ್ರತಿ ಕ್ರಿಯಿಸುತ್ತಿರುತ್ತಾರೆ. ಕುವೆಂಪು ಅಂಥದ್ದನ್ನೆಲ್ಲ ನಿರ್ಲಕ್ಷಿಸಿ - ‘ಕುಸ್ತಿ ಅಖಾಡಕ್ಕೆ ಬರುವವರು ಕನಿಷ್ಠ ಲಂಗೋಟಿ ಹಾಕಿ ಬರಬೇಕು.

ಲಂಗೋಟಿ ಹಾಕದೆ ಅಖಾಡಕ್ಕೆ ಬರುವವರ ಜತೆ ನಾನು ಕುಸ್ತಿ ಅಡಲಾರೆ’ ಎಂದರು. ಕುವೆಂಪು ಅವರ ಈ ಮಾತನ್ನು ತಾವು ಮನನ ಮಾಡಿ ಕೊಳ್ಳಿ ಎಂದು ವಿನಂತಿಸುವೆ. ಬೀದಿಯನ್ನೇ ಅಖಾಡ ಮಾಡಿಕೊಳ್ಳುವ ತಮ್ಮ ಮತ್ತು ತಮ್ಮಂಥವರ ಮಾನ ಮರ್ಯಾದೆ ಆಗ ಸ್ವಲ್ಪವಾದರೂ ಉಳಿಯಬಹುದು.

click me!