
ಚೆನ್ನೈ(ಡಿ.06): ತಾಯಿಯೊಬ್ಬಳು ತನ್ನ ಮಗುವಿನ ಮೇಲೆ ತೋರುವುದಕ್ಕಿಂತ ಹೆಚ್ಚಿನ ಪ್ರೀತಿ, ಜಯಲಲಿತಾ ತನ್ನ ತಮಿಳುನಾಡಿನ ಜನತೆಗೆ ತೋರಿಸಿದ್ದಾರೆ. ಇಂದು ಅಮ್ಮನನ್ನು ಕಳೆದುಕೊಂಡ ತಮಿಳುನಾಡಿನ ಜನತೆ ಅನಾಥರಾಗಿ ರೋದಿಸುತ್ತಿದ್ದಾರೆ.
ತನ್ನ ಜನತೆಗಾಗಿ ಜಯಲಲಿತಾ ಜನಪ್ರಿಯ 'ಅಮ್ಮ' ಯೋಜನೆಗಳನ್ನು ಜಾರಿಗೊಇಳಿಸಿದ್ದರು. ತಮಿಳುನಾಡಿನಾದ್ಯಂತ ಈ ಅಮ್ಮ ಬ್ರ್ಯಾಂಡ್ ಜನ ಪ್ರಖ್ಯಾತಿ ಪಡೆದಿದೆ. ಹಾಗಾದರೆ ಈ ಅಮ್ಮ ಬ್ರ್ಯಾಂಡ್'ಗಳಾವುವು? ಇಲ್ಲಿದೆ ವಿವರ
1. ಅಮ್ಮ ಕ್ಯಾಂಟೀನ್: ಕಡಿಮೆ ಖರ್ಚಿನಲ್ಲಿ ಅನ್ನ, ಸಾಂಬಾರು, ಇಡ್ಲಿ, ಮೊಸರನ್ನ ನೀಡುವ ಅಮ್ಮ ಕ್ಯಾಂಟೀನ್‌ಗಳು ಚೆನ್ನೈನಲ್ಲಿ 2014ರಲ್ಲಿ ಆರಂಭವಾದವು.
2. ಅಮ್ಮ ಔಷಧಾಲಯ: ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಔಷಧಗಳನ್ನು ಮಾರುವ ಈ ಅಂಗಡಿಗಳನ್ನು ತಮಿಳುನಾಡಿನ ಬೇರೆ ಬೇರೆ ಜಿಲ್ಲೆಗಳಲ್ಲಿ ಆರಂಭಿಸಲಾಗಿದೆ.
3. ಅಮ್ಮ ಮೊಬೈಲ್ ಫೋನ್: ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ತಮಿಳು ಸಾಫ್ಟ್‌ವೇರ್ ಇರುವ ಮೊಬೈಲ್ ಫೋನ್ ನೀಡುವ ಯೋಜನೆ.
4. ಅಮ್ಮ ಕುಡಿಯುವ ನೀರು: ಇತರ ಕಂಪೆನಿಗಳಿಗಿಂತ ತೀರಾ ಕಡಿಮೆ ಬೆಲೆಗೆ ಬಾಟಲಿಯಲ್ಲಿ ಕುಡಿಯುವ ನೀರು ಮಾರಾಟ ಮಾಡುವ ಯೋಜನೆ ಇದು.
5. ಅಮ್ಮ ಬಿತ್ತನೆ ಬೀಜ: ರೈತರಿಗೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ಪೂರೈಸುವ ಯೋಜನೆ ಈ ವರ್ಷದ ಜನವರಿಯಲ್ಲಿ ಆರಂಭವಾಯಿತು.
6. ಅಮ್ಮ ಸಿಮೆಂಟ್: ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಮನೆ ಕಟ್ಟಲು, ಮನೆ ರಿಪೇರಿ ಮಾಡಿಕೊಳ್ಳಲು ಸಬ್ಸಿಡಿ ದರದಲ್ಲಿ ಸಿಮೆಂಟ್ ಪೂರೈಸುವ ಯೋಜನೆ.
7. ಅಮ್ಮ ಆರೋಗ್ಯ ತಪಾಸಣೆ ಯೋಜನೆ: ಬಡವರಿಗೆ ಕಡಿಮೆ ದರದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಜಾರಿಗೆ ತಂದ ಯೋಜನೆ ಇದು.
8. ಅಮ್ಮ ಲ್ಯಾಪ್‌ಟಾಪ್: ಬಡ ವಿದ್ಯಾರ್ಥಿಗಳಿಗೆ 2 ಜಿ.ಬಿ. ರ್‍ಯಾಮ್, 120 ಜಿ.ಬಿ. ಹಾರ್ಡ್ ಡಿಸ್ಕ್ ಇರುವ ಲ್ಯಾಪ್‌ಟಾಪ್‌ಗಳನ್ನು ಉಚಿತವಾಗಿ ನೀಡುವ ಯೋಜನೆ.
9. ಅಮ್ಮ ಶಿಶು ಆರೈಕೆ ಕಿಟ್: ಬಾಣಂತಿಯರಿಗೆ ಶಿಶು ಪಾಲನೆಗೆ ಅಗತ್ಯವಿರುವ ವಸ್ತುಗಳಿಗೆ ಕಿಟ್ ನೀಡುವ ಯೋಜನೆ.
10. ಅಮ್ಮ ಉಪ್ಪು: ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಉಪ್ಪು ಮಾರಾಟ ಮಾಡುವ ಯೋಜನೆ.
11. ಅಮ್ಮ ಕಾಲ್ ಸೆಂಟರ್: ನಗರ ಪ್ರದೇಶದ ಜನ ನೀರಿನ ಸಂಪರ್ಕ ಪಡೆಯಲು, ಆಸ್ತಿ ತೆರಿಗೆ ಪಾವತಿಸಲು ಮತ್ತು ಇತರ ಸೇವೆಗಳನ್ನು ಪಡೆಯಲು ಇರುವ ಏಕಗವಾಕ್ಷಿ ಕೇಂದ್ರ ಇದು.
12. ಅಮ್ಮ ಸಿನಿಮಾ ಮಂದಿರ: ಹವಾನಿಯಂತ್ರಿತ ಹಾಲ್‌ನಲ್ಲಿ ₹ 25 ದರದಲ್ಲಿ ಸಿನಿಮಾ ತೋರಿಸುವ ಅಮ್ಮ ಸಿನಿಮಾ ಮಂದಿರಗಳನ್ನು ಆರಂಭಿಸುವ ಯೋಜನೆ ತಮಿಳುನಾಡು ಸರ್ಕಾರದ್ದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.