AIADMK ಪಕ್ಷದೊಳಗೆ ಚದುರಂಗದಾಟ: ಪಕ್ಷದ ಗದ್ದುಗೆಗೆ ಪಟ್ಟು ಹಿಡಿದಿದ್ದಾಳಂತೆ ಶಶಿಕಲಾ

Published : Dec 06, 2016, 02:08 AM ISTUpdated : Apr 11, 2018, 12:51 PM IST
AIADMK ಪಕ್ಷದೊಳಗೆ ಚದುರಂಗದಾಟ: ಪಕ್ಷದ ಗದ್ದುಗೆಗೆ ಪಟ್ಟು ಹಿಡಿದಿದ್ದಾಳಂತೆ ಶಶಿಕಲಾ

ಸಾರಾಂಶ

ಅಪೊಲೋ ಆಸ್ಪತ್ರೆ ವೈದ್ಯರ ಪ್ರಕಾರ ಜಯಲಲಿತಾ ಸಾವು ರಾತ್ರಿ 11 ಗಂಟೆ 30 ನಿಮಿಷಕ್ಕೆ ಆಗಿದೆ. ಆದರೆ, ಜಯಲಲಿತಾ ಒಡೆತನದ ಜಯ ಪ್ಲಸ್ ಟಿವಿಯಲ್ಲಿ ಸಂಜೆ 5.35ಕ್ಕೆ ಅಮ್ಮ ವಿಧಿವಶರಾದ ಕುರಿತಾಗಿ ಘೋಷಿಸಿದ್ದರು. ಎಐಎಡಿಎಂಕೆ ಪಕ್ಷದ ವೆಬ್​'ನಲ್ಲಿ ಬೆಳಗ್ಗೆ 10.45ಕ್ಕೇ ಈ ಕುರಿತಾಗಿ ಪ್ರಕಟಿಸಿದ್ದರು. ಹಾಗಾದರೆ, ಅಮ್ಮಾ ಕೊನೆಯುಸಿರೆಳೆದ ಸಮಯ ಯಾವಾಗ ಎನ್ನುವ ಗೊಂದಲಕ್ಕೆ ಇನ್ನೂ ಉತ್ರ ಸಿಕ್ಕಿಲ್ಲ. ಆದರೆ, ಜಯಲಲಿತಾ ಸಾವು ಹಾಗೂ ಸುಳ್ಳು ವದಂತಿಗಳ ಹಿಂದೆ ಷಡ್ಯಂತ್ರ ನಡೆದಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಚೆನ್ನೈ(ಡಿ.06): ಜಯಲಲಿತಾ ಆಸ್ಪತ್ರೆಯಲ್ಲಿ ಬರೋಬ್ಬರಿ 74 ದಿನ ಕಾಲ ದೂಡಿದ್ದರು. ಆದರೆ, ಆರೋಗ್ಯದ ಮಾಹಿತಿ ಮಾತ್ರ ತೆರೆದ ಪುಸ್ತಕವಾಗಿರದೆ ಬಹಳ ಗೌಪ್ಯವಾಗಿಡಲಾಗಿತ್ತು. ಇದಕ್ಕೆ ಕಾರಣ ಏನು? ಇದರ ಹಿಂದೆ ಯಾರೆಲ್ಲಾ ಇದ್ದಾರೆ ಅನ್ನೋ ಸ್ಫೋಟಕ ಸತ್ಯ ಸುವರ್ಣನ್ಯೂಸ್ ಪತ್ತೆ ಹಚ್ಚಿದೆ.

ಅಪೊಲೋ ಆಸ್ಪತ್ರೆ ವೈದ್ಯರ ಪ್ರಕಾರ ಜಯಲಲಿತಾ ಸಾವು ರಾತ್ರಿ 11 ಗಂಟೆ 30 ನಿಮಿಷಕ್ಕೆ ಆಗಿದೆ. ಆದರೆ, ಜಯಲಲಿತಾ ಒಡೆತನದ ಜಯ ಪ್ಲಸ್ ಟಿವಿಯಲ್ಲಿ ಸಂಜೆ 5.35ಕ್ಕೆ ಅಮ್ಮ ವಿಧಿವಶರಾದ ಕುರಿತಾಗಿ ಘೋಷಿಸಿದ್ದರು. ಎಐಎಡಿಎಂಕೆ ಪಕ್ಷದ ವೆಬ್​'ನಲ್ಲಿ ಬೆಳಗ್ಗೆ 10.45ಕ್ಕೇ ಈ ಕುರಿತಾಗಿ ಪ್ರಕಟಿಸಿದ್ದರು. ಹಾಗಾದರೆ, ಅಮ್ಮಾ ಕೊನೆಯುಸಿರೆಳೆದ ಸಮಯ ಯಾವಾಗ ಎನ್ನುವ ಗೊಂದಲಕ್ಕೆ ಇನ್ನೂ ಉತ್ರ ಸಿಕ್ಕಿಲ್ಲ. ಆದರೆ, ಜಯಲಲಿತಾ ಸಾವು ಹಾಗೂ ಸುಳ್ಳು ವದಂತಿಗಳ ಹಿಂದೆ ಷಡ್ಯಂತ್ರ ನಡೆದಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಶಶಿಕಲಾ ರಾಜಕೀಯ ಚದುರಂಗದಾಟ?

ಜಯಲಲಿತಾ ಆಪ್ತೆ ಶಶಿಕಲಾ ಕಡೆಗೆ ಎಲ್ಲರೂ ಬೊಟ್ಟು ಮಾಡುತ್ತಿದ್ದಾರೆ. ಸಾವಿಗೂ ಮೊದಲೇ ಜಯಲಲಿತಾ ಸಾವು ಅಂತ ಸುದ್ದಿ ಪ್ರಸಾರ ಮಾಡಿತ್ತು. ಕಡೆಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳೇ ಸ್ಪಷ್ಟನೆ ಕೊಟ್ಟಿದ್ದು ಇನ್ನೂ ಚಿಕಿತ್ಸೆ ನಡೆಯುತ್ತಿದೆ ಎಂದಿದ್ದರು. ಹಾಗಾದರೆ ಈ ಗೊಂದಲಕ್ಕೆ ಕಾರಣ ಅಧಿಕಾರದ ಗದ್ದುಗೆ ಏರಲು ಹವಣಿಸುತ್ತಿರುವ ಗುಂಪುಗಾರಿಕೆಯೇ?.

ಪನ್ನೀರ್ ಸೆಲ್ವಂ v/s ಶಶಿಕಲಾ

ಸದ್ಯದ ಮಾಹಿತಿ ಪ್ರಕಾರ ಮುಖ್ಯಮಂತ್ರಿಯಾಗಿ ಪನ್ನೀರ್ ಸೆಲ್ವಂ ಆದರೂ ಎಐಎಡಿಎಂಕೆ ಪಕ್ಷದ ಕಾರ್ಯದರ್ಶಿ ಆಗುವುದು ಶಶಿಕಲಾ ಎನ್ನುವ ಗುಸುಗುಸು ಜೋರಾಗಿದೆ. ಈ ಮಾತು ನಿಜವಾದರೆ ಪನ್ನೀರ್ ಸೆಲ್ವಂ ಕುರ್ಚಿ ಭದ್ರವಲ್ಲ. ಬದಲಾಗಿ ತಮಿಳುನಾಡು ಜನ ಮತ್ತೊಮ್ಮೆ ಮಹಿಳಾ ಮುಖ್ಯಮಂತ್ರಿಯನ್ನು ಎದುರು ಕಾಣಬಹುದು. ಆದರೆ, ಅಣ್ಣಾ ಡಿಎಂಕೆ ಪಕ್ಷದ ಕಾರ್ಯದರ್ಶಿಯಾಗಿ ಶಶಿಕಲಾ ನೇಮಕ ಖಾತ್ರಿಯಾಗಿದೆ.

ಎಐಡಿಎಂಕೆ ಪಕ್ಷದೊಳಗೆ ಮುಸುಕಿನ ಗುದ್ದಾಟ

ಅಧಿಕಾರ ಗದ್ದುಗೆ ಏರಲು ಜಯಾ ಸಾವಿಗೂ ಮುನ್ನವೇ  ತಮಿಳುನಾಡಿಗೆ ಬೆಂಕಿ ಹಚ್ಚುವ ಸುಳ್ಳು  ಸುದ್ದಿ ಹರಿಯ ಬಿಟ್ಟಿದ್ದೇ ಅಪ್ತ ಸ್ನೇಹಿತೆ ಶಶಿಕಲಾ ಅಂತೆ. ಇದಕ್ಕೆ ಜಯಾ ಪ್ಲಸ್ ಚಾನೆಲ್ ಬಳಕೆ ಆಗಿದೆ ಎನ್ನುವ ಮಾತು ಕೇಳಿ ಬಂದಿದೆ.

ಗದ್ದುಗೆಗೆ ಪಟ್ಟು ಹಿಡದಿದ್ದಳು ಶಶಿಕಲಾ

ಜಯಲಲಿತಾ ಉತ್ತರಾಧಿಕಾರಿ ಆಗ್ಬೇಕು ಅಂತ ಪಟ್ಟುಹಿಡಿದಿರುವ ಶಶಿಕಲಾ, ಪಕ್ಷದೊಳಗೆ ಎಲ್ಲವನ್ನೂ ನಿಯಂತ್ರಣಕ್ಕೆ ಪಡೆಯಲು ಹವಣಿಸುತ್ತಿದ್ದಾರೆ. ಇದರಿಂದ ಪನ್ನೀರ್ ಸೆಲ್ವಂ ಪಟಾಲಂ ಅಸಮಾಧಾನ ವ್ಯಕ್ತಪಡಿಸಿದೆ. ಹೀಗಾಗಿ ಜಯಲಲಿತಾ ಸಾವಿನ ಸುದ್ದಿ ಘೋಷಣೆ ತಡವಾಯಿತು ಎನ್ನುವ ವಾದವೂ ಇದೆ. ಒಟ್ಟಿನಲ್ಲಿ ಅಣ್ಣಾ ಡಿಎಂಕೆ ಪಕ್ಷ ಹೈಕಮಾಂಡ್ ಕಳೆದುಕೊಂಡು ಅನಾಥವಾಗಿದೆ. ಆದರೆ, ಬಣ ರಾಜಕೀಯದಲ್ಲಿ ಯಾರ ಕೈ ಮೇಲಾಗುತ್ತದೇ ಸದ್ಯಕ್ಕಿರುವ ಪ್ರಶ್ನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಾಯಿ ಕಡಿತಕ್ಕೆ ಚಿಕಿತ್ಸೆ ಪಡೆದರೂ ಒಂದು ತಿಂಗಳ ನಂತರ ಬಾಲಕಿ ಸಾವು
ಗಂಡನ ಕೊಲೆ ಮಾಡಿ, ಶವವನ್ನು ಗ್ರೈಂಡರ್‌ನಲ್ಲಿ ರುಬ್ಬಿ ಚರಂಡಿಗೆ ಎಸೆದ ಹೆಂಡ್ತಿ!