
ಬೆಂಗಳೂರು (ಮೇ. 24): ಸಾಗರದಾಳದಲ್ಲಿ ಅದೆಷ್ಟೋ ಹಡಗುಗಳು ಮುಳುಗಿ ಹೋಗಿವೆ. ಆದರೆ ಕೆಲವು ಹಡಗುಗಳು ಮುಳುಗಿದ ಅದೆಷ್ಟೋ ಶತಮಾನಗಳ ಬಳಿಕವೂ ಜಗತ್ತನ್ನು ಕಾಡುತ್ತಲೇ ಇರುತ್ತದೆ. ಇದಕ್ಕೆ ಕಾರಣ ಆ ಹಡಗಿನ ಜನಪ್ರಿಯತೆ ಒಂದೆಡೆಯಾದರೆ ಅದರ ಜೊತೆ ಮುಳುಗಿದ ಅಪಾರ ಸಂಪತ್ತು ಕೂಡ ಜನರ ಗಮನ ಸೆಳೆಯುತ್ತಲೇ ಇರುತ್ತದೆ.
ಇದೀಗ ಆ ರೀತಿಯ ಹಡಗೊಂದು ಸುದ್ದಿಯಲ್ಲಿದೆ. ಸುಮಾರು ಮೂರು ಶತಮಾನಗಳ ಹಿಂದೆ ಅಟ್ಲಾಂಟಿಕ್ ಸಾಗರದಾಳದಲ್ಲಿ ಬ್ರಿಟಿಷ್ ನೌಕಾಸೇನೆ ಹೊಡೆದುರುಳಿಸಿದ್ದ ಸ್ಪೇನ್ ಹಡಗೊಂದನ್ನು ಪತ್ತೆ ಮಾಡಲಾಗಿದೆ. ಸ್ಪೇನ್ ನ ’ದಿ ಸಾನ್ ಜೋಸ್ ಎಂಬ ಹಡಗನ್ನು ಜೂನ್ 8, 1708 ರಲ್ಲಿ ಬ್ರಿಟಿಷ್ ಪಡೆಗಳು ಹೊಡೆದುರುಳಿಸಿದ್ದವು. ಇದು ಜಲಯುದ್ದದ ಇತಿಹಾಸದಲ್ಲೇ ಅತ್ಯಂತ ದುಬಾರಿ ದುರಂತ ಎಂದು ಪರಿಗಣಿಸಲ್ಪಟ್ಟಿತ್ತು.
ಸದ್ಯ ಈ ಹಡಗನ್ನು ಆಧುನಿಕ ರೊಬೋಟ್ ಸಬ್ ಮರೀನ್ ಸಹಾಯದಿಂದ ಪತ್ತೆ ಹಚ್ಚಲಾಗಿದೆ. ರೆಮುಸ್ 6000 ಎಂಬ ಪುಟಾಣಿ ಯಂತ್ರ ಸಾನ್ ಜೋಸ್ ಹಡಗನ್ನು ಪತ್ತೆ ಮಾಡಿದೆ. ಮುಳುಗಿದ್ದ ಹಡಗಿನಲ್ಲಿ ಸುಮಾರು 17 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಚಿನ್ನದ ಸಂಪತ್ತು ಇದೆ ಎನ್ನಲಾಗಿದೆ. ರೆಮುಸ್ 6000 ಈ ಮೊದಲು ಬ್ರೇಝಿಲ್ ಸಾಗರಾದಾಳದಲ್ಲಿ ಮುಳುಗಿದ್ದ ಏರ್ ಫ್ರಾನ್ಸ್ 447 ವಿಮಾನ ಪತ್ತೆ ಹಚ್ಚಿ ಸುದ್ದಿ ಮಾಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.