ಚೌಕೀದಾರ್‌ ರೀತಿ ‘ಮುಜಾಹಿದ್‌’ ಸೇರ್ಪಡೆಗೆ ಕರೆ!

Published : Apr 14, 2019, 08:29 AM IST
ಚೌಕೀದಾರ್‌ ರೀತಿ ‘ಮುಜಾಹಿದ್‌’ ಸೇರ್ಪಡೆಗೆ ಕರೆ!

ಸಾರಾಂಶ

ಚೌಕೀದಾರ್‌ ರೀತಿ ಹೆಸರಿನ ಹಿಂದೆ ‘ಮುಜಾಹಿದ್‌’ ಸೇರಿಸಿಕೊಳ್ಳಲು ಕರೆ!| ಜಮ್ಮು-ಕಾಶ್ಮೀರದ ಶ್ರೀನಗರದ ಉಪ ಮೇಯರ್‌ ಶೇಖ್‌ ಮೊಹಮ್ಮದ್‌ ಇಮ್ರಾನ್‌ ಕರೆ

ಶ್ರೀನಗರ[ಏ.14]: ಬಿಜೆಪಿಯ ‘ಮೈ ಭೀ ಚೌಕಿದಾರ್‌’ ಅಭಿಯಾನ ಭಾರೀ ಪ್ರಚಾರ ಗಿಟ್ಟಿಸಿದ ಬೆನ್ನಲ್ಲೇ, ಜಮ್ಮು-ಕಾಶ್ಮೀರದ ಶ್ರೀನಗರದ ಉಪ ಮೇಯರ್‌ ಶೇಖ್‌ ಮೊಹಮ್ಮದ್‌ ಇಮ್ರಾನ್‌ ಅವರು, ಮುಸ್ಲಿಂ ಯುವಕರು ಕೂಡಾ ತಮ್ಮ ಹೆಸರಿನ ಹಿಂದೆ ಮುಜಾಹಿದ್‌(ಜಿಹಾದ್‌) ಎಂಬ ಪದ ಸೇರಿಸಿಕೊಳ್ಳುವಂತೆ ಹಾಗೂ ಕೋಮು ದ್ವೇಷದ ಮೂಲಕ ಚುನಾವಣೆ ಎದುರಿಸುತ್ತಿರುವ ಪಕ್ಷಗಳನ್ನು ಸೋಲಿಸುವಂತೆ ಕರೆ ನೀಡಿದ್ದಾರೆ.

ಈ ಬಗ್ಗೆ ಕರೆ ಕೊಟ್ಟಿರುವ ಇಮ್ರಾನ್‌ ಅವರು, ‘ಜಿಹಾದ್‌(ಪವಿತ್ರ ಯುದ್ಧ) ಎಂದರೆ, ಶತ್ರುಗಳ ವಿರುದ್ಧದ ಧಾರ್ಮಿಕ ಯುದ್ಧ ಅಥವಾ ದುಷ್ಟಶಕ್ತಿಗಳ ವಿರುದ್ಧದ ಹೋರಾಟವಾಗಿದೆ. ಹಾಗಾಗಿ, ಪ್ರತಿಯೊಬ್ಬ ಮುಸ್ಲಿಮರು ತಮ್ಮ ಹೆಸರಿನ ಹಿಂದೆ ಮುಜಾಹಿದ್‌ ಎಂಬುದನ್ನು ಸೇರಿಸಿಕೊಳ್ಳಬೇಕು ಎಂದಿದ್ದಾರೆ.

ಸದ್ಯ ಈ ವಿಚಾರ ಭಾರೀ ವಿವಾದ ಸೃಷ್ಟಿಸಿದ್ದು, ಉಪ ಮೇಯರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸರ್ಕಾರದ ಒಳ್ಳೆ ಯೋಜನೆ ಪರವಾಗಿ ಫಲಾನುಭವಿಗಳು ನಿಲ್ಲಬೇಕು: ಸಿಎಂ ಸಿದ್ದರಾಮಯ್ಯ
ಪಾಲಿಕೆ ಚುನಾವಣೆಯಲ್ಲಿ ರಾಜ್ ಠಾಕ್ರೆಗೆ ಮುಖಭಂಗ? 'ರಸಮಲೈ' ವ್ಯಂಗ್ಯಕ್ಕೆ ಅಣ್ಣಾಮಲೈ ಕೊಟ್ಟ ತಿರುಗೇಟು ಹೇಗಿದೆ ಗೊತ್ತಾ?