
ಅಹಮದಾಬಾದ್[ಏ.14]: ರಾತ್ರಿಯ ವೇಳೆಯಲ್ಲಿ ಸಕ್ರಿಯವಾಗಿರುವ ನಿಶಾಚರಿ ಪ್ರಾಣಿಗಳಿಗೆಂದೇ ಗುಜರಾತಿನ ಕನ್ಕಾರಿಯಾದಲ್ಲಿ ಪ್ರಾಣಿ ಸಂಗ್ರಹಾಲಯವೊಂದನ್ನು ನಿರ್ಮಿಸಲಾಗಿದೆ. ಭಾರತದಲ್ಲೇ ಮೊದಲು ಎನಿಸಿರುವ ಈ ಪ್ರಾಣಿ ಸಂಗ್ರಹಾಲಯ ದೇಶ ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ವರ್ಷಕ್ಕೆ 3 ಕೋಟಿ ರು. ಆದಾಯ ಗಳಿಸುತ್ತಿದೆ.
ಮುಳ್ಳು ಹಂದಿ, ಕಾಡು ಬೆಕ್ಕು, ಗೂಬೆ, ಕತ್ತೆಕಿರುಬ ಮತ್ತಿತರ ನಿಶಾಚರ ಪ್ರಾಣಿಗಳಿಗಾಗಿ ಸುಮಾರು 17 ಕೋಟಿ ರು. ವೆಚ್ಚದಲ್ಲಿ 2017ರಲ್ಲಿ ಈ ಪ್ರಾಣಿ ಸಂಗ್ರಹಾಲಯ ನಿರ್ಮಿಸಲಾಗಿದೆ. ಈ ಪ್ರಾಣಿ ಸಂಗ್ರಹಾಲಯದಲ್ಲಿ ಹಗಲಿನ ವೇಳೆಯಲ್ಲಿ ರಾತ್ರಿಯಂತೆ ಹಾಗೂ ರಾತ್ರಿಯ ವೇಳೆ ಹಗಲಿನ ರೀತಿ ವಾತಾವರಣವನ್ನು ಸೃಷ್ಟಿಸಲಾಗಿದೆ.
ನಿಶಾಚರ ಪ್ರಾಣಿಗಳ ಬಗ್ಗೆ ಮಾಹಿತಿ ನೀಡಲು 7 ನಿಮಿಷಗಳ ಸಾಕ್ಷ್ಯ ಚಿತ್ರವೊಂದನ್ನು ಪ್ರವಾಸಿಗರಿಗೆ ತೋರಿಸಲಾಗುತ್ತದೆ. ರಾತ್ರಿಯ ವೇಳೆ ಇರುವ ತಾಪಮಾನ ಕಾಯ್ದುಕೊಳ್ಳಲು ಭೂಶಾಖದ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಅಲ್ಲದೇ ಈ ಝೂನಲ್ಲಿ ವಿಶೇಷ ಬೆಳಕಿನ ವ್ಯವಸ್ಥೆ ಇದ್ದು ರಾತ್ರಿಯ ವಾತಾವಣದಂತೆ ಕಂಡು ಬರುತ್ತದೆ. ಅರಣ್ಯದ ರೀತಿಯಲ್ಲೇ ಪ್ರಾಣಿ ಸಂಗ್ರಹಾಲಯವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಪ್ರಾಣಿ ಸಂಗ್ರಹಾಲಯದ ನಿರ್ದೇಶಕ ಆರ್.ಕೆ. ಸಾಹು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.