ಭದ್ರತಾ ಪಡೆಗಳು ಬುಡಕಟ್ಟು ಹೆಣ್ಮಕ್ಕಳಿಗೆ ಟಾರ್ಚರ್ ಕೊಡುವುದನ್ನು ಪ್ರಶ್ನಿಸಿ ಪೋಸ್ಟ್ ಹಾಕಿದ್ದಕ್ಕೆ ಡೆಪ್ಯುಟಿ ಜೈಲರ್ ಅಮಾನತು

By Suvarna Web DeskFirst Published May 8, 2017, 4:48 PM IST
Highlights

ಇಲ್ಲಿನ ಬಾಸ್ಟರ್ ಪ್ರದೇಶದಲ್ಲಿ ಹೆಣ್ಮಕ್ಕಳ ಮೇಲೆ ಭದ್ರತಾ ಪಡೆ ಅಧಿಕಾರಿಗಳು ಕಿರುಕುಳ ನೀಡುತ್ತಾರೆಂದು ಆರೋಪಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ ಕಾರಣ ರಾಯ್ಪುರ ಸೆಂಟ್ರಲ್ ಜೈಲಿನ ಡೆಪ್ಯುಟಿ ಜೈಲರ್ ವರ್ಷಾ ಡೋಂಗ್ರೆಯನ್ನು ಅಮಾನತುಗೊಳಿಸಲಾಗಿದೆ.

ಛತ್ತೀಸ್'ಗಡ್ (ಮೇ.08): ಇಲ್ಲಿನ ಬಾಸ್ಟರ್ ಪ್ರದೇಶದಲ್ಲಿ ಹೆಣ್ಮಕ್ಕಳ ಮೇಲೆ ಭದ್ರತಾ ಪಡೆ ಅಧಿಕಾರಿಗಳು ಕಿರುಕುಳ ನೀಡುತ್ತಾರೆಂದು ಆರೋಪಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ ಕಾರಣ ರಾಯ್ಪುರ ಸೆಂಟ್ರಲ್ ಜೈಲಿನ ಡೆಪ್ಯುಟಿ ಜೈಲರ್ ವರ್ಷಾ ಡೋಂಗ್ರೆಯನ್ನು ಅಮಾನತುಗೊಳಿಸಲಾಗಿದೆ.

'ನಾನು ಇಲ್ಲಿನ ಬುಡಕಟ್ಟು ಹೆಣ್ಮಕ್ಕಳಿಗೆ ಟಾರ್ಚರ್ ಕೊಡುವುದನ್ನು ನೋಡಿದ್ದೇನೆ. ಹೆಣ್ಮಕ್ಕಳ ಸ್ತನ, ಮಣಿಕಟ್ಟಿಗೆ ಎಲೆಕ್ಟ್ರಿಕ್ ಶಾಕ್ ನೀಡುತ್ತಾರೆ. ಆ ಗಾಯದ ಗುರುತುಗಳನ್ನು ನೋಡಿದ್ದೇನೆ. ಅದು ಭಯವನ್ನು ಹುಟ್ಟಿಸುತ್ತದೆ. ನಮ್ಮ ಸಂವಿಧಾನ, ಕಾನೂನು ಇಂತಹದ್ದಕ್ಕೆಲ್ಲಾ ಅವಕಾಶ ನೀಡುವುದಿಲ್ಲ.ನಮ್ಮನ್ನು ನಾವು ಅವಲೋಕಿಸಿಕೊಳ್ಳಬೇಕಿದೆ. ಬಾಸ್ಟರ್ ನಲ್ಲಿ ವಸಾಹತುಶಾಹಿ ವ್ಯವಸ್ಥೆಯಿದೆ. ಹಳ್ಳಿಗಳಿಗೆ ಬೆಂಕಿಯಿಡಲಾಗುತ್ತದೆ. ಮಹಿಳೆಯರ ಮೇಲೆ ಅತ್ಯಾಚಾರವೆಸಗಲಾಗುತ್ತದೆ. ಮಾವೋಯಿಸಂ ಅಂತ್ಯವಾಗುತ್ತದೆಯೇ? ಎಂದು ವರ್ಷಾ ಡೋಂಗ್ರೆ ಪೋಸ್ಟ್ ಹಾಕಿದ್ದರು.

ಇವರ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಡಿಲೀಟ್ ಮಾಡಿದ್ದಾರೆ. ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದ್ದು ಅವರ ವಿರುದ್ಧ ತನಿಖೆ ನಡೆಸುವಂತೆ ಆದೇಶಿಸಲಾಗಿದೆ.

click me!