ವಿದೇಶಕ್ಕೆ ಹೋಗಬೇಕಿದ್ರೆ 18000 ಕೋಟಿ ರು. ಠೇವಣಿ ಇಡಿ: ನರೇಶ್‌ಗೆ ಸೂಚನೆ

By Kannadaprabha News  |  First Published Jul 10, 2019, 8:44 AM IST

ಹಾರಾಟ ಸ್ಥಗಿತಗೊಳಿಸಿರುವ ಜೆಟ್‌ ಏರ್‌ವೇಸ್‌ನ ಮಾಜಿ ಮುಖ್ಯಸ್ಥ ನರೇಶ್‌ ಗೋಯಲ್‌ ತಾತ್ಕಾಲಿಕ ಅವಧಿಗೆ ವಿದೇಶಕ್ಕೆ ಪ್ರಯಾಣಿಸಬೇಕಾದರೆ18,000 ಕೋಟಿ ರು. ಮುಂಗಡ ಠೇವಣಿ ಇಡುವಂತೆ ದೆಹಲಿ ಹೈಕೋರ್ಟ್‌ ಸೂಚಿಸಿದೆ.


ನವದೆಹಲಿ: ಹಾರಾಟ ಸ್ಥಗಿತಗೊಳಿಸಿರುವ ಜೆಟ್‌ ಏರ್‌ವೇಸ್‌ನ ಮಾಜಿ ಮುಖ್ಯಸ್ಥ ನರೇಶ್‌ ಗೋಯಲ್‌, ತಮ್ಮ ವಿದೇಶ ಪ್ರವಾಸಕ್ಕೆ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌, ಮಧ್ಯಂತರ ಆದೇಶ ನೀಡಲು ನಿರಾಕರಿಸಿದೆ. ಒಂದು ವೇಳೆ ಗೋಯಲ್‌ ತಾತ್ಕಾಲಿಕ ಅವಧಿಗೆ ವಿದೇಶಕ್ಕೆ ತೆರಳಲು ಬಯಸಿದರೆ 18,000 ಕೋಟಿ ರು. ಮುಂಗಡ ಹಣ ಠೇವಣಿ ಇಡುವಂತೆ ಕೋರ್ಟ್‌ ಸೂಚಿಸಿದೆ. ಇದೇ ವೇಳೆ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದ್ದನ್ನು ಪ್ರಶ್ನಿಸಿ ಗೋಯಲ್‌ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದೆ.

click me!