
ನವದೆಹಲಿ (ನ.24):ರಾಜ್ಯಸಭೆಯಲ್ಲಿ ರೂ.500 ಹಾಗೂ ರೂ.1000 ನೋಟುಗಳ ಅಪಮೌಲ್ಯೀಕರಣ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಪ್ರಧಾನಿ ಮನಮೊಹನ್ ಸಿಂಗ್, ಸರ್ಕಾರದ ಕ್ರಮವನ್ನು ಭಾರೀ ನಿರ್ವಹಣಾ ವೈಫಲ್ಯವೆಂದು ಬಣ್ಣಿಸಿದ್ದಾರೆ.
ಸರ್ಕಾರದ ಉದ್ದೇಶಗಳೊಂದಿಗೆ ನನಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಆದರೆ ತನ್ನ ಉದ್ದೇಶ ಸಾಧನೆಗೆ ಸರ್ಕಾರ ಕೈಗೊಂಡಿರುವ ಕ್ರಮವು ಭಾರಿ ನಿರ್ವಹಣಾ ವೈಫಲ್ಯವಾಗಿದೆ ಎಂದು ಆರ್ಥಿಕ ತಜ್ಞರೂ ಆಗಿರುವ ಮನಮೋಹನ್ ಸಿಂಗ್ ಹೇಳಿದ್ದಾರೆ.
ಪ್ರಸ್ತುತ ಅಪಮೌಲ್ಯೀಕರಣ ಕ್ರಮವು ದೇಶದ ಅಸಂಘಟಿತ ವಲಯ, ಸಣ್ಣ ಪ್ರಮಾಣದ ವ್ಯಾಪಾರ, ರೈತರು ಹಾಗೂ ಕೃಷಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದಿರುವ ಮನಮೋಹನ್ ಸಿಂಗ್, ದೇಶದ ಜಿಡಿಪಿ ಶೇ.2ರಷ್ಟು ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದ್ದಾರೆ.
ಅಪಮೌಲ್ಯೀಕರಣ ಕ್ರಮದಿಂದ ಮುಂದಿನ ದಿನಗಳಲ್ಲಿ ದೇಶಕ್ಕೆ ಪ್ರಯೋಜನವಾಗಲಿದೆ ಎಂಬ ಪ್ರಧಾನಿಯ ವಾದವನ್ನು ಮನಮೋಹನ್ ಸಿಂಗ್ ಅಲ್ಲಗಳೆದಿದ್ದಾರೆ.
ಕೇವಲ 50 ದಿನಗಳ ಮಟ್ಟಿಗೆ ತೊಂದರೆಯಾಗುವುದು ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ, ಅದರೆ ಈ 50 ದಿನಗಳು ಬಡವರ ಪಾಲಿಗೆ ಬಹಳ ದೊಡ್ಡ ಆಪತ್ತು ತಂದೊಡ್ಡಲಿದೆ ಎಂದು ಮನಮೊಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.