
ನವದೆಹಲಿ: ದೆಹಲಿಯ ಕಾಲೇಜೊಂದರಲ್ಲಿ ಹೋಳಿ ನೆಪದಲ್ಲಿ ಹುಡುಗಿಯರ ಮೇಲೆ ವೀರ್ಯ ತುಂಬಿದ ಬಲೂನ್ ಎಸೆಯಲಾಗಿತ್ತು ಎಂಬ ಪ್ರಕರಣ ದೇಶಾದ್ಯಂತ ಭಾರೀ ಟೀಕೆ ವ್ಯಕ್ತವಾಗಿತ್ತು. ಪತ್ರಕರ್ತೆ ಸಾಗರಿಕಾ ಘೋಷ್ ಘಟನೆ ಖಂಡಿಸಿ, ಟ್ವೀಟ್ ಮಾಡಿದ್ದರು.
ಆದರೆ, ಪತ್ರಕರ್ತೆಯ ವಾದಕ್ಕೆ ಕರ್ನಾಟಕ ಮೂಲದ ಡಾ. ಜಗದೀಶ್ ಹೀರೇಮಠ್ ಎಂಬುವವರು ತಮ್ಮ ಕಾಲಾತೀತಂ ಎಂಬ ಟ್ವೀಟರ್ ಖಾತೆ ಮೂಲಕ ತಿರುಗೇಟು ನೀಡಿದ್ದಾರೆ. ಅವರ ತಿರುಗೇಟಿನ ಟ್ವೀಟ್ ಇದೀಗ ವೈರಲ್ ಆಗಿದೆ.
ವೈದ್ಯರ ವಾದ ಹೀಗಿದೆ. ‘ವೀರ್ಯ ವಾತಾವರಣಕ್ಕೆ ಬಂದ 5 ನಿಮಿಷಗಳಲ್ಲೆ ಒಣಗಿ ಹೋಗುತ್ತದೆ. ಇನ್ನು, ಒಬ್ಬ ವಯಸ್ಕ ಒಂದು ಬಾರಿಗೆ ಸುಮಾರು 5 ಎಂಎಲ್ ವೀರ್ಯ ಸ್ಖಲಿಸಬಹುದು. ಪದೇ ಪದೇ ಅದನ್ನು ತೆಗೆಯುವುದು ಅಸಾಧ್ಯ.
ಹೀಗಾಗಿ ಒಂದು ಬಲೂನ್ ವೀರ್ಯ ತುಂಬಬೇಕಾದಲ್ಲಿ, ಕನಿಷ್ಠ 100ಕ್ಕೂ ಅಧಿಕ ಮಂದಿ ಒಂದೇ ಬಾರಿ ಸ್ಖಲಿಸಬೇಕು. ಹೀಗಾಗಿ ಬಲೂನ್‌ನಲ್ಲಿ ಅಷ್ಟುಪ್ರಮಾಣದ ವೀರ್ಯ ತುಂಬುವುದು ಸಾಧ್ಯವಿಲ್ಲ. ಅದಕ್ಕೆ ನೀರು ಮಿಶ್ರಣ ಮಾಡಿದ್ದಾರೆ ಎಂದು ವಾದಿಸಲೂ ಸಾಧ್ಯವಿಲ್ಲ, ಏಕೆಂದರೆ ನೀರಿನಲ್ಲಿ ಮಿಶ್ರಣ ಮಾಡಿದರೆ, ಅದು ಉಳಿಯುವುದಿಲ್ಲ.
ಹೀಗಾಗಿ ವಿದ್ಯಾರ್ಥಿನಿಯರ ಮೇಲೆ ವೀರ್ಯ ತುಂಬಿದ ಬಲೂನ್ ಎರಚಲಾಯ್ತು ಎಂಬ ವಾದ ಸುಳ್ಳು. ವೃಥಾ ಆರೋಪ ಮಾಡುವ ಬದಲು ಪತ್ರಕರ್ತೆ ವಿಷಯವನ್ನು ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ವೈದ್ಯರು ತಿರುಗೇಟು ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.