ರಾಮೇಶ್ವರಂ ಸಮುದ್ರದಲ್ಲಿ ಇಂದು ಶ್ರೀದೇವಿ ಅಸ್ಥಿ ವಿಸರ್ಜನೆ

By Suvarna Web DeskFirst Published Mar 3, 2018, 7:08 AM IST
Highlights

ದುಬೈನಲ್ಲಿ ಫೆ.24ರಂದು ಸಾವನ್ನಪ್ಪಿದ ನಟಿ ಶ್ರೀದೇವಿ ಅವರ ಚಿತಾಭಸ್ಮವನ್ನು ರಾಮೇಶ್ವರಂಗೆ ತರಲಾಗಿದ್ದು, ಶನಿವಾರ ಅದನ್ನು ಸಮುದ್ರದಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ನವದೆಹಲಿ: ದುಬೈನಲ್ಲಿ ಫೆ.24ರಂದು ಸಾವನ್ನಪ್ಪಿದ ನಟಿ ಶ್ರೀದೇವಿ ಅವರ ಚಿತಾಭಸ್ಮವನ್ನು ರಾಮೇಶ್ವರಂಗೆ ತರಲಾಗಿದ್ದು, ಶನಿವಾರ ಅದನ್ನು ಸಮುದ್ರದಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ಶ್ರೀದೇವಿಯ ಚಿತಾಭಸ್ಮ ಮತ್ತು ಅಸ್ಥಿಯನ್ನು ಮಡಿಕೆಯಲ್ಲಿ ಸಂಗ್ರಹಿಸಿ ಅದನ್ನು ವಿಶೇಷ ವಿಮಾನದ ಮೂಲಕ ಪತಿ ಬೋನಿ ಕಪೂರ್‌ ಮತ್ತು ಇತರ ಕುಟುಂಬ ಸದಸ್ಯರು ರಾಮೇಶ್ವರಕ್ಕೆ ತಂದಿದ್ದಾರೆ.

ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿದ ಬಳಿಕ ಚಿತಾಭಸ್ಮವನ್ನು ಸಮುದ್ರದಲ್ಲಿ ವಿಸರ್ಜಿಸಲಾಗುತ್ತದೆ. ಫೆ.28ರಂದು ಶ್ರೀದೇವಿ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು.

ಹಿಂದು ಸಂಪ್ರದಾಯದ ಪ್ರಕಾರ ದೇಹದ ಅಂತ್ಯಸಂಸ್ಕಾರ ನಡೆಸಿದ ಬಳಿಕ ಅಸ್ಥಿ ವಿಸರ್ಜನೆ ಮಾಡುವುದು ಮಹತ್ವದ್ದಾಗಿದೆ.

click me!