ಹೆತ್ತಮ್ಮಳಿಗೆ ಬೇಡವಾದ ಕಂದ ಖಾಕಿ ಮಡಿಲಲ್ಲಿ ಅದೆಷ್ಟು ಚೆಂದ!

By Web DeskFirst Published Nov 2, 2018, 12:59 PM IST
Highlights

ನವಜಾತ ಹೆಣ್ಣು ಮಗುವನ್ನು ಪೊದೆಯಲ್ಲಿ ಎಸೆದಿದ್ದ ಪಾಪಿಗಳು! ಮಗುವನ್ನು ರಕ್ಷಿಸಿ ಜೀವ ಉಳಿಸಿದ ದೆಹಲಿ ಟ್ರಾಫಿಕ್ ಪೊಲೀಸರು! ಪೊದೆಯಿಂದ ಮಗು ರಕ್ಷಿಸಿದ ಟ್ರಾಫಿಕ್ ಪೇದೆಗಳಾದ ಅನಿಲ್, ಅಮರ್ ಸಿಂಗ್! ದೆಹಲಿಯ ಆಫ್ರಿಕಾ ರೆವಿನ್ಯೂ ರೋಡ್ ನಲ್ಲಿ ನಡೆದ ಘಟನೆ! ಮಗು ಮೇಲೆ ದಾಳಿ ನಡೆಸಲು ಕಾಯುತ್ತಿದ್ದ ಬೀದಿ ನಾಯಿಗಳು! ಮಗು ಸುರಕ್ಷಿತವಾಗಿದೆ ಎಂದ ಸಫ್ದರ್ ಜಂಗ್ ಆಸ್ಪತ್ರೆ ವೈದ್ಯರು 

ನವದೆಹಲಿ(ನ.2): ರಾಷ್ಟ್ರ ರಾಜಧಾನಿ ನವದೆಹಲಿಯ ಟ್ರಾಫಿಕ್ ಪೊಲೀಸರು, ಪೊದೆಯಲ್ಲಿ ಎಸೆಯಲಾಗಿದ್ದ ನವಜಾತ ಶಿಶುವೊಂದನ್ನು ರಕ್ಷಿಸಿರುವ ಘಟನೆ ನಡೆದಿದೆ.

ಇಲ್ಲಿನ ಆಫ್ರಿಕಾ ರೆವಿನ್ಯೂ ರೋಡ್ ನಲ್ಲಿ ಕರ್ತವ್ಯ ನಿರತರಾಗಿದ್ದ ಟ್ರಾಫಿಕ್ ಪೇದೆ ಅನಿಲ್ ಹಾಗೂ ಅಮರ್ ಸಿಂಗ್ ಪೊದೆಯಿಂದ ಮಗು ಅಳುತ್ತಿರುವ ಶಬ್ದ ಕೇಳಿದ್ದರು.

ಕೂಡಲೇ ಪೊದೆ ಸಮೀಪ ತೆರಳಿದ ಇಬ್ಬರೂ ಪೇದೆಗಳು ನವಜಾತ ಹೆಣ್ಣು ಶಿಶುವನ್ನು ಯಾರೋ ಅನಾಮಿಕರು ಬಿಟ್ಟು ಹೋಗಿದ್ದನ್ನು ಗಮನಿಸಿದರು. ಅನಿಲ್ ಮತ್ತು ಅಮರ್ ಸಿಂಗ್ ಪೊದೆ ಸಮೀಪ ತಲುಪುವ ಹೊತ್ತಿಗಾಗಲೇ ಬೀದಿ ನಾಯಿಗಳು ಶಿಶುವನ್ನು ಸುತ್ತುವರೆದಿದ್ದವು ಎನ್ನಲಾಗಿದೆ.

Delhi: Police (Traffic) Head Constable Anil, Constable Amar Singh & Constable Parveen yesterday rescued a newborn girl from the bushes near RK Khanna Tennis Stadium at Africa Avenue Road. The baby was immediately rushed to Safdarjung Hospital & a case has been registered. pic.twitter.com/9LvhhhSCsp

— ANI (@ANI)

ಸದ್ಯ ಮಗುವನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಮಗು ಸುರಕ್ಷಿತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

click me!