ಬಸ್ ನಲ್ಲೇ ಕಾಮುಕನಿಂದ ವಿದ್ಯಾರ್ಥಿನಿ ಖಾಸಗಿ ಅಂಗ ಸ್ಪರ್ಶಿಸಿ ಕಿರುಕುಳ

By Web Desk  |  First Published Nov 2, 2018, 12:56 PM IST

ಬಸ್ಸಿನಲ್ಲೇ ಮುದುಕನೋರ್ವ ತನ್ನ ಕಾಮುಕತನವನ್ನು ಪ್ರದಶರ್ನ ಮಾಡಿದ್ದು, ವಿದ್ಯಾರ್ಥಿನಿಯ ಖಾಸಗಿ ಅಂಗಗಳನ್ನು ಸ್ಪರ್ಶಿಸಿ ಕಿರುಕುಳ ನೀಡಿದ ಘಟನೆ ಬೆಂಗಳೂರು - ಹಾಸನ ಕೆ ಎಸ್ ಆರ್ ಟಿಸಿ ಬಸ್ ನಲ್ಲಿ ನಡೆದಿದೆ. 


ಬೆಂಗಳೂರು :  ಕೆ ಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣ ಮಾಡುವಾಗ ನಿದ್ದೆ ಮಾಡಿಕೊಂಡು ತೆರಳುವ ಮುನ್ನ ವಿದ್ಯಾರ್ಥಿನಿಯರೇ ಎಚ್ಚರಿಕೆ ವಹಿಸಿ. ಯಾಕೆಂದರೆ ಬಸ್ ನಲ್ಲಿ ನಿದ್ದೆ ಮಾಡುತ್ತಿರುವಾದ ಖಾಸಗಿ ಅಂಗಾಂಗಗಳನ್ನು ಸವರುವ ಕಾಮುಕರು ಕಿರಕುಳ ನೀಡುವ ಸಾಧ್ಯತೆ ಇದೆ. 

ವಿದ್ಯಾರ್ಥಿನಿಯೋರ್ವಳು ಬೆಂಗಳೂರಿನಿಂದ ಹಾಸನಕ್ಕೆ ತೆರಳುವ ವೇಳೆ ವಿದ್ಯಾರ್ಥಿನಿಯೋರ್ವಳಿಗೆ ಇಂತಹದ್ದೇ ರೀತಿಯ ಅನುಭವವಾಗಿದೆ. ಮುದುಕನೋರ್ವ ಬಸ್ ನಂ. 947ರಲ್ಲಿ  ವಿದ್ಯಾರ್ಥನಿಗೆ ಖಾಸಗಿ ಭಾಗಗಗಳನ್ನು ಮುಟ್ಟಿ ಕಿರುಕುಳ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

Tap to resize

Latest Videos

ವಿದ್ಯಾರ್ಥಿನಿ ಬಸ್ ನಲ್ಲಿ ನಿದ್ದೆ ಮಾಡಿಕೊಂಡು ತೆರಳುತ್ತಿದ್ದ ವೇಳೆ ಕಳೆದ ಆಗಸ್ಟ್ ತಿಂಗಳ 4 ರಂದು ಆಕೆಯ ಮೈ ಸವರಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ತಕ್ಷಣ ಎಚ್ಚೆತ್ತ ವಿದ್ಯಾರ್ಥಿನಿ ಈ ಬಗ್ಗೆ ಸಹಪ್ರಯಾಣಿಕರ ಗಮನಕ್ಕೆ ತಂದಿದ್ದು, ಪ್ರಯಾಣಿಕರು ಮುದುಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಗಲಿನಲ್ಲೇ ಈ ಘಟನೆ ನಡೆದಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!