ರಾಜಧಾನಿಯಲ್ಲಿ ಉಸಿರಾಡೋದೆ ಡೇಂಜರಸ್

By Web DeskFirst Published Nov 4, 2018, 12:43 PM IST
Highlights

ರಾಜಧಾನಿ ಗಾಳಿ ಯಾವ ಪರಿ ಮಲಿನಗೊಂಡಿದೆ ಎಂದರೆ, ಇಲ್ಲಿನ ಗಾಳಿ ಕುಡಿದರೆ ನಿತ್ಯ 15 ರಿಂದ 20 ಸಿಗರೆಟ್ ಸೇವಿಸುವುದಕ್ಕೆ ಸಮ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಗಾಳಿ ಯಾವ ಪರಿ ಮಲಿನಗೊಂಡಿದೆ ಎಂದರೆ, ಇಲ್ಲಿನ ಗಾಳಿ ಕುಡಿದರೆ ನಿತ್ಯ 15 ರಿಂದ 20 ಸಿಗರೆಟ್ ಸೇವಿಸುವುದಕ್ಕೆ ಸಮ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.ಚಳಿಗಾಲ ಬಂತೆಂದರೆ ದೆಹಲಿಯಲ್ಲಿ ವಿಪರೀತ ವಾಯುಮಾಲಿನ್ಯ ಕಾಣಿಸಿಕೊಳ್ಳುತ್ತದೆ.  

ಇದರಿಂದ ಶ್ವಾಸಕೋಶದ ಮೇಲೆಷ್ಟು ಪರಿಣಾಮ ಬೀರುತ್ತದೆ ಎಂಬುದಕ್ಕೆ ವೈದ್ಯರು ಸಿಗರೆಟ್ ಉದಾಹರಣೆ ನೀಡಿದ್ದಾರೆ. ದೆಹಲಿಯ ಜನರ ಶ್ವಾಸಕೋಶದ ಬಣ್ಣವೇ ಬದಲಾಗುತ್ತಿರುವುದನ್ನು ಕಳೆದ 30 ವರ್ಷಗಳ ಸೇವಾವಧಿಯಲ್ಲಿ  ನೋಡಿದ್ದೇನೆ. ಧೂಮಪಾನಿ ಗಳ ಶ್ವಾಸಕೋಶದಲ್ಲಿ ಮಾತ್ರ ಕಪ್ಪು ಅಂಶ ಕಂಡು ಬರುತ್ತಿತ್ತು. 

ಉಳಿದವರ ಶ್ವಾಸಕೋಶ ನಸುಗೆಂಪು ಬಣ್ಣದಲ್ಲಿ ಇರುತ್ತಿತ್ತು. ಆದರೆ ಈಗ ಶ್ವಾಸಕೋಶ ದಲ್ಲಿ ಕಪ್ಪು ಅಂಶ ಕಂಡು ಬರುತ್ತಿದೆ ಎಂದು ಲಂಗ್ ಕೇರ್ ಫೌಂಡೇಶನ್ ಟ್ರಸ್ಡಿ ಡಾ| ಅರವಿಂದ ಕುಮಾರ್ ಹೇಳಿದ್ದಾರೆ. 

click me!